ಸುಳ್ಯದ ಶಿಕ್ಷಣತಜ್ಞ ಡಾ. ಚಂದ್ರಶೇಖರ ದಾಮ್ಲಯವರು ನಿಜವಾದ ಅರ್ಥದಲ್ಲಿ ಸಾಧಕ, ಸ್ವಂತ ಬದುಕನ್ನು ಶಿಕ್ಷಣದ ಶಕ್ತಿಯಿಂದ ಕಟ್ಟಿ ಕೊಂಡ ಅವರು ಸಾವಿರಾರು ವಿದ್ಯಾರ್ಥಿಗಳು ಸಾಧನೆಯ ದಾರಿಯಲ್ಲಿ ನಡೆಯಲು ಪ್ರೇರೇಪಿಸುವಂತಹ ಶಿಕ್ಷಣ ಸಂಸ್ಥೆಯೊಂದನ್ನು ಕಟ್ಟಿರುವ ಯಶೋಗಾಥೆ ಇಲ್ಲಿದೆ. ಜತೆಗೆ ಅವರು ಸಾಹಿತ್ಯ, ಯಕ್ಷಗಾನ ಹಾಗೂ ಶೈಕ್ಷಣಿಕವಾಗಿ ಮಾಡಿರುವ ಸಾಧನೆಗಳೂ ಮಾದರಿಯಾಗಿವೆ. ಕಾಂತಾವರ ಕನ್ನಡ ಸಂಘದ 'ನಾಡಿಗೆ ನಮಸ್ಕಾರ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯ 250ನೇ ಪುಸ್ತಕ.
ಬೆಂಗಳೂರಿನಲ್ಲಿ ನೆಲೆಸಿರುವ ಡಾ. ದೀಪಾ ಫಡ್ಕೆ ಅವರು ಮೂಲತಃ ದಕ್ಷಿಣಕನ್ನಡದ ಬೆಳ್ತಂಗಡಿಯವರು. ಉಜಿರೆಯಲ್ಲಿ ಪದವಿ ಪಡೆದು, ಕನ್ನಡ ಎಂ.ಎ. ಪದವಿಯನ್ನು ಮೈಸೂರು ಮುಕ್ತ ವಿಶ್ವವಿದ್ಯಾನಿಲಯದಿಂದ ಪಡೆದಿದ್ದಾರೆ. 'ಪುರಂದರ ಕನಕರ ಕೀರ್ತನೆ ಗಳಲ್ಲಿ ಅಭಿವ್ಯಕ್ತಿ : ಮನೋವೈಜ್ಞಾನಿಕ ಅಧ್ಯಯನ' ಎನ್ನುವ ವಿಷಯದಲ್ಲಿ ಅಧ್ಯಯನ ನಡೆಸಿರುವ ದೀಪಾ ಅವರಿಗೆ ಮೈಸೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ. ಪದವಿ ದೊರೆತಿದೆ. ದೀಪಾ ಫಡ್ಡೆಯವರು, ಸಂಸ್ಕೃತಿ ಕುರಿತ ಬರಹಗಳ ಗುಚ್ಛವಾದ 'ಋತ', ’ಹರಪನಹಳ್ಳಿ ಭೀಮವ್ವ', 'ಡಾ. ಪ್ರದೀಪಕುಮಾರ್ ಹೆಬ್ರಿ-ಮಹಾಕಾವ್ಯಗಳ ಕವಿ' ಹಾಗೂ ’ಲೋಕಸಂವಾದಿ' (ಮೊಗಸಾಲೆಯವರ ಬದುಕು ಬರಹಗಳ ಕುರಿತು), ನಾಡಿಗೆ ನಮಸ್ಕಾರ ಮಾಲೆಗಾಗಿ ಈ ಕೃತಿಯಲ್ಲದೆ ...
READ MORE