ನೆಲದ ಸುರಭಿ-ಮನದ ಮಾರುತ-ವೈದೇಹಿ

Author : ಬಿ.ಎನ್. ಸುಮಿತ್ರಾಬಾಯಿ

Pages 56

₹ 45.00




Year of Publication: 2017
Published by: ಕನ್ನಡ ಸಂಘ, ಕಾಂತಾವರ
Address: ಕೆ.ಬಿ. ಜಿನರಾಜ ಹೆಗ್ಡೆ ಸ್ಮಾರಕ ಕನ್ನಡ ಭವನ, ಕಾಂತಾವರ, ಅಂಚೆ-ಕಾಂತಾವರ-574129, ಕಾರ್ಕಳ ತಾಲ್ಲೂಕು, ಉಡುಪಿ ಜಿಲ್ಲೆ
Phone: 8548933733

Synopsys

ಕಾಂತಾವರ ಕನ್ನಡ ಸಂಘದ  'ನಾಡಿಗೆ ನಮಸ್ಕಾರ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯ 211ನೇ ಪುಸ್ತಕ.  ನೆಲದ ಸುರಭಿ; ಮನದ ಮಾರುತ ವೈದೇಹಿ ಕನ್ನಡದ ವಿಶಿಷ್ಟ ಲೇಖಕಿ. ವೈದೇಹಿ ತಮ್ಮ ಸಣ್ಣಕತೆಗಳು, ಪ್ರಬಂಧಗಳು, ಕಾದಂಬರಿ ಹಾಗೂ ಕವಿತೆಗಳಲ್ಲಿ ಅಭಿವ್ಯಕ್ತಿಸಿರುವ ಸ್ತ್ರೀಲೋಕ ಬಹಳ ಸಂಕೀರ್ಣವಾದುದು. ಅದನ್ನು ಗ್ರಹಿಸುವ ನೆಲೆಗಳನ್ನು ಈ ಕೃತಿಯಲ್ಲಿ ಒದಗಿಸುವ ಮೂಲಕ ಕನ್ನಡದ ಖ್ಯಾತ ವಿಮರ್ಶಕಿ ಡಾ. ಬಿ.ಎನ್. ಸುಮಿತಾ ಬಾಯಿ ಒಂದು ಉಪಯುಕ್ತ ಕೃತಿಯನ್ನು ಕನ್ನಡಕ್ಕೆ ಒದಗಿಸಿದಂತಾಗಿದೆ. ವೈದೇಹಿ ಯವರು ತಮ್ಮ ಅನುಭವಕ್ಕೆ ದಕ್ಕಿದ ಹೆಣ್ಣು ಮಕ್ಕಳು ಹಾಗೂ ಅವರ ಅನುಭವಗಳನ್ನು ಶೋಧಿಸುವ ಮೂಲಕ ಸಣ್ಣ ಕಥೆಗಳಿಗೆ, ಒಂದು ವಿಶಿಷ್ಟ ಸೀಪ್ರಜ್ಞೆಯನ್ನು, ಸಂವೇದನಾತ್ಮಕ ಲಕ್ಷಣವನ್ನು ಒದಗಿಸುತ್ತಾ ಬಂದಿದ್ದಾರೆ. ಸ್ತ್ರೀಯರ ಕಣ್ಣಿನ ನೆಲೆಯಿಂದ ಎಂದರೆ ಅಂತಃಕರಣದ ಆದ್ರ್ರತೆಯ ಮೂಲಕವಾಗಿ ಜಗತ್ತನ್ನು ನೋಡುವುದು ಅವರ ವೈಶಿಷ್ಟ್ಯ ಎನ್ನುತ್ತಾರೆ ಸುಮಿತ್ರಾಬಾಯಿ.

About the Author

ಬಿ.ಎನ್. ಸುಮಿತ್ರಾಬಾಯಿ

ಜೈನಶಾಸ್ತ್ರ ಮತ್ತು ಪ್ರಾಕೃತ ಪರಿಣಿತೆ ಆಗಿರುವ ಬಿ.ಎನ್‌. ಸುಮಿತ್ರಾಬಾಯಿ ಅವರು ಕನ್ನಡದ ಪ್ರಮುಖ ವಿಮರ್ಶಕರಲ್ಲಿ ಒಬ್ಬರು. ಸಾರ್ವತ್ರಿಕದೆಡೆಗೆ, ವಿಚಯ,  ಅಯನ, ಮಹಿಳೆ ಮತ್ತು ಸಾಹಿತ್ಯ, ಸರಹದ್ದುಗಳ ಆಚೆ, ಸ್ತ್ರೀವಾದಿ ಪ್ರವೇಶಿಕೆ ಅವರ ಪ್ರಮುಖ ವಿಮರ್ಶಾ ಕೃತಿಗಳು. ’ಕಲ್ಯಾಣ ಸರಸ್ವತಿ, ಕಾತ್ಯಾಯನಿ ವಾಚಿಕೆ, ಸ್ತ್ರೀವಾದಿ ಪ್ರವೇಶಿಕೆ’ ಕೃತಿಗಳನ್ನು ಸಂಪಾದಿಸಿದ್ದಾರೆ.  ಅವರಿಗೆ ಅನುಪಮಾ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಲಭಿಸಿವೆ. ಡಾ. ಬಿ. ಎನ್. ಸುಮಿತ್ರಾ ಬಾಯಿ ಅವರ  ಬೊಗಸೆಯಲ್ಲಿ ಹೊಳೆ ನೀರು (ಲೇಖನ ಸಂಕಲನ) ಕೃತಿಗೆ 2014ರ ವಿ.ಎಂ. ಇನಾಂದಾರ ಸ್ಮಾರಕ ವಿಮರ್ಶಾ ಪ್ರಶಸ್ತಿ ಸಂದಿದೆ ಹಾಗೂ ಪಿ. ...

READ MORE

Related Books