ಕಾಂತಾವರ ಕನ್ನಡ ಸಂಘದ ನಾಡಿಗೆ ನಮಸ್ಕಾರ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯ ಒಂಭತ್ತನೆಯ ಪುಸ್ತಕ ಸಸ್ಯ ವಿಜ್ಞಾನಿ ಡಾ. ಪಳ್ಳತ್ತಡ್ಕ ಕೇಶವ ಭಟ್ಟ. ಕೇಶವ ಭಟ್ಟರು (03.01.1940) ಸಸ್ಯ ವಿಜ್ಞಾನಿಯಾದರೂ ಮನುಷ್ಯನ ಸರ್ವಾಂಗೀಣ ಆರೋಗ್ಯ ಮತ್ತು ಭೂಗೋಳ ಹಾಗೂ ಖಗೋಳ ಶಾಸ್ತ್ರದ ಬಗೆಗೂ ಅಷ್ಟೇ ಆಸಕ್ತಿ ವಹಿಸಿದವರು. 'ಹಸಿರು ಹೊನ್ನು' ಖ್ಯಾತಿಯ ಡಾ. ಬಿ.ಜಿ.ಎಲ್. ಸ್ವಾಮಿಯವರ ಅಚ್ಚುಮೆಚ್ಚಿನ ಶಿಷ್ಯರಾಗಿದ್ದ ಇವರು ತಮ್ಮ ಅಧ್ಯಯನ ವಿಷಯಗಳನ್ನು ಸುರಸ ಶೈಲಿಯಲ್ಲಿ ಬರೆಯಬಲ್ಲರು. ಸರಳ ಪ್ರಕೃತಿ ಜೀವನ ಮತ್ತು ಸಂಪೂರ್ಣ ಆರೋಗ್ಯದ ಬಗ್ಗೆ ತಮ್ಮ ಉದ್ಭೋಧಕ ಭಾಷಣಗಳಿಂದ ಜನರನ್ನು ಪ್ರಜ್ಞಾವಂತರನ್ನಾಗಿ ಮಾಡುತ್ತಿರುವ ಅವರು ಕಳೆದ ಇಪ್ಪತ್ತೈದು ವರ್ಷಗಳಿಂದ ಅಮೇರಿಕಾದ ವೆನೆಜುವೆಲಾದ 'ಒರಿಯಂತೆ ವಿಶ್ವವಿದ್ಯಾನಿಲಯ'ದಲ್ಲಿ ಪ್ರಾಧ್ಯಾಪಕರಾಗಿ ಮತ್ತು ಅಲ್ಲಿನ ಸರಕಾರ ಕೊಡ ಮಾಡಿದ ಜಮೀನಿನಲ್ಲಿ ಪ್ರಯೋಗ ನಿರತರಾಗಿರುವ ಡಾ. ಪಳ್ಳತ್ತಡ್ಕ ಅವರು ಅಮೇರಿಕಾ ಮಾತ್ರವಲ್ಲ ಆಫ್ರಿಕಾ ಹಾಗೂ ಏಷ್ಯಾ ಖಂಡಗಳಲ್ಲಿ ವ್ಯಾಪಕ ಪ್ರವಾಸ ಮಾಡಿ ಅಧ್ಯಯನ, ಅಧ್ಯಾಪನಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕನ್ನಡ ಮಾತ್ರವಲ್ಲದೆ ಸ್ಪ್ಯಾನಿಷ್ ಭಾಷೆಯಲ್ಲಿ ಕೃತಿಗಳನ್ನು ರಚಿಸಿದ್ದಾರೆ. ಇವರ ಕೆಲವು ಕೃತಿಗಳು ಇಂಗ್ಲೀಷ್ ಮತ್ತು ಫ್ರೆಂಚ್ ಭಾಣಿಕೆ ಅನುವಾದ ಆಗಿವೆ. ಅವರನ್ನು ಪರಿಚಯಿಸುವ ಪುಸ್ತಕ.
©2024 Book Brahma Private Limited.