ಕರ್ನಾಟಕದ ಏಕೀಕರಣಕ್ಕಾಗಿ ಶ್ರಮಿಸಿದ ಹಿರಿಯ ಜೀವ ಕಯ್ಯಾರ ಕಿಞ್ಞಣ್ಣ ರೈ. ಸದ್ಯ ಕೇರಳ ಸೇರಿರುವ ಕಾಸರಗೋಡು ಅನ್ನು ಕನ್ನಡ ನಾಡಿನ ಭಾಗ ಆಗಿಸಲು ಹಗಲಿರುಳು ಶ್ರಮಿಸಿದ ಹೋರಾಟಗಾರ. ಕವಿ-ಕೃಷಿಕ ಕಯ್ಯಾರ ಅವರ ಕೊಡುಗೆ ಕೇವಲ ಸಾಹಿತ್ಯ-ಕಾವ್ಯಕ್ಕೆ ಮಾತ್ರ ಸೀಮಿತವಾಗಿಲ್ಲ. ಇಡೀಯಾಗಿ ಕನ್ನಡ ನಾಡು ಸ್ಮರಿಸುವಂತಹ ಕೆಲಸವನ್ನು ಕಯ್ಯಾರರು ಮಾಡಿದ್ದಾರೆ. ಕಯ್ಯಾರರ ಬದುಕು-ಬರಹವನ್ನು ನರೇಂದ್ರ ರೈ ದೇರ್ಲ ಅವರು ಈ ಪುಸ್ತಕದಲ್ಲಿ ಕಟ್ಟಿಕೊಟ್ಟಿದ್ದಾರೆ. ಕಾಂತಾವರ ಕನ್ನಡ ಸಂಘದ ನಾಡಿಗೆ ನಮಸ್ಕಾರ ಸರಣಿಯಲ್ಲಿ ಪ್ರಕಟವಾದ 67 ಪುಸ್ತಕವಿದು.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯ ಡಾ. ಶಿವರಾಮ ಕಾರಂತ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿರುವ ಡಾ. ನರೇಂದ್ರ ರೈ ದೇರ್ಲ ಅವರು ಪತ್ರಕರ್ತರೂ ಹೌದು. ಹಾಗೆಯೇ ಕವಿಗಳೂ ಕೂಡ. 'ತೊದಲು' ಕವನ ಸಂಕಲನದ ನಂತರ ಗದ್ಯ ಬರವಣಿಗೆ ಮುಂದುವರಿಸಿದರು. ಆದರೆ, ಪದ್ಯದ ಗುಣ ಅವರ ಗದ್ಯಕ್ಕಿದೆ. ಅವರಿಗೆ ಸಾವಯವ ಕೃಷಿಯಲ್ಲಿ ವಿಶೇಷ ಆಸಕ್ತಿ . ಹಾಗಯೇ ಪರಿಸರದ ಬಗ್ಗೆ ಗಾಢ ಅನುರಕ್ತಿ. ತೇಜಸ್ವಿಯೊಳಗಿನ ಕಲಾವಿದ'ನನ್ನು ಕಂಡರಿಸಿದ ನರೇಮದ್ರ ಅವರು 'ನಮ್ಮೆಲ್ಲರ ತೇಜಸ್ವಿ'ಯ ಅನಾವರಣಗೊಳಿಸಿದ್ದಾರೆ. ’ವಿಶುಕುಮಾರ್ ಬದುಕು ಬರೆಹ'; 'ಹೊನ್ನಯ ಶೆಟ್ಟಿ ಬದುಕು ಬರೆಹ'; 'ಡಾ. ಮೋಹನ ...
READ MORE