ಕಾಂತಾವರ ಕನ್ನಡ ಸಂಘವು ಪ್ರಕಟಿಸುತ್ತಿರುವ 'ನಾಡಿಗೆ ನಮಸ್ಕಾರ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯ 247ನೇ ಪುಸ್ತಕವು ಖ್ಯಾತ ಉನ್ನತ ಶಿಕ್ಷಣ ತಜ್ಞ ಡಾ. ನಿಟ್ಟೆ ರಮಾನಂದ ಶೆಟ್ಟಿ (ಡಾ. ಎನ್.ಆರ್. ಶೆಟ್ಟಿ) ಅವರನ್ನು ಕುರಿತದ್ದಾಗಿದೆ. ಮದರಾಸು ವಿಶ್ವವಿದ್ಯಾನಿಲಯ, ಇಂಗ್ಲೆಂಡಿನ ಎಸಕ್ಸ್ ವಿಶ್ವವಿದ್ಯಾನಿಲಯಗಳಲ್ಲಿ ಕಲಿತು, ಮುಂಬಯಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಪಿಎಚ್.ಡಿ ಪಡೆದಿರುವ ಅವರು ಸುರತ್ಕಲ್ ಕೆ.ಆರ್.ಇ.ಸಿಯಲ್ಲಿ ಪ್ರಿನ್ಸಿಪಾಲರಾಗಿ, ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಎರಡು ಅವಧಿಗಳಿಗೆ ಕುಲಪತಿಗಳಾಗಿದ್ದರು. ಕಲಬುರ್ಗಿಯ ಗುಲ್ಬರ್ಗ ವಿಶ್ವವಿದ್ಯಾನಿಲಯದ ಕುಲಪತಿಗಳಾಗಿದ್ದ ಅವರು ಇಂದಿರಾಗಾಂಧಿ ಮುಕ್ತ ವಿಶ್ವವಿದ್ಯಾನಿಲಯದ ಮುಖ್ಯಸ್ಥರಾಗಿದ್ದರು. ನಿಟ್ಟೆ ಕೆಮ್ಮಣ್ಣು ಶ್ರೀ ದುರ್ಗಾಪರಮೇಶ್ವರಿ ದೇವಳದ ಆಡಳಿತ ಮುಕ್ತೇಸರರಾಗಿರುವ ಅವರ ಎನ್.ಆರ್.ಎಸ್. ಅವರ ಬಗ್ಗೆ ಇರುವ ಕಿರುಹೊತ್ತಿಗೆಯಿದು.
©2024 Book Brahma Private Limited.