ಕೋಟೇಶ್ವರದವರಾದ ಲಕ್ಷ್ಮೀನಾರಾಯಣ ಆಚಾರ್ಯ ಅವರು ಹೆಸರಾಂತ ರಥಶಿಲ್ಪಿಗಳು. ಶಿಲ್ಪಗುರು ಪ್ರಶಸ್ತಿ ಪುರಸ್ಕೃತರಾಗಿರುವ ಎಲ್.ಎನ್. ಆಚಾರ್ಯ ಅವರ ಶಿಲ್ಪಕಲೆ ಹಾಗೂ ಜೀವನ ಕುರಿತ ಕೃತಿಯನ್ನು ಕೆ. ಮಹಾಬಲ ಆಚಾರ್ಯ ಅವರು ಬರೆದಿದ್ದಾರೆ. ಕಾಂತಾವರ ಕನ್ನಡ ಸಂಘವು ಪ್ರಕಟಿಸುತ್ತಿರುವ ’ನಾಡಿಗೆ ನಮಸ್ಕಾರ’ ಸರಣಿಯಲ್ಲಿ ಪ್ರಕಟವಾದ 177 ಪುಸ್ತಕವಿದು.
ಸಾಲಿಗ್ರಾಮ ಮಹಾಬಲೇಶ್ವರ ಆಚಾರ್ಯ ಕೊಡಂಕೂರಿನ ವಿಶ್ವಬ್ರಾಹ್ಮಣ ಸಂಸ್ಕೃತ ವಿದ್ಯಾಪೀಠದಲ್ಲಿ ಗೌರವ ಅಧ್ಯಾಪಕರಾಗಿರುವ ಮಹಾಬಲೇಶ್ವರ ಆಚಾರ್ಯರು ಕರ್ನಾಟಕ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಇಲಾಖೆಯ ವಿವಿಧ ಕೇಂದ್ರಗಳಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿದ ಆಚಾರ್ಯರು ನಿವೃತ್ತರಾಗುವಾಗ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯದಲ್ಲಿ ಆಡಳಿತಾಧಿಕಾರಿಯಾಗಿದ್ದರು. ಅವರು ಕೋಟ ಶ್ರೀ ವಿರಾಡ್ವಿಶ್ವ ಬ್ರಾಹ್ಮಣ ಸಮಾಜೋದ್ಧಾರಕ ಸಂಘದ ಕಾರ್ಯದರ್ಶಿಯಾಗಿ, ದ.ಕ. ಜಿಲ್ಲಾ ವಿಶ್ವಬ್ರಾಹ್ಮಣ ಯುವಜನ ಸಭಾದ ಜತೆ ಕಾರ್ಯದರ್ಶಿಯಾಗಿ, ಬಾರ್ಕೂರು ಶ್ರೀ ಕಾಳಿಕಾಂಬಾ ದೇವಸ್ಥಾನದ ಸಲಹಾ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ವಿಶ್ವಕರ್ಮ ವಿದ್ಯಾರ್ಥಿಶಿಬಿರಗಳಲ್ಲಿ ...
READ MORE