ಕಾಂತಾವರದ ಕನ್ನಡ ಸಂಘದ ‘ನಾಡಿಗೆ ನಮಸ್ಕಾರ ಶೀರ್ಷಿಕೆಯಡಿ ಪ್ರಕಟಗೊಂಡ ಕೃತಿ-ರಥಿಕನಾಗಿ ನೆಲೆಗೊಂಡ ಸಾರಥಿ ಪ್ರೊ. ಹೆರಂಜೆ ಕೃಷ್ಣಭಟ್ಟ. ಈ ಕೃತಿಯ ಕರ್ತೃ ಡಾ. ಎನ್. ತಿರುಮಲೇಶ್ವರ ಭಟ್ಟ. ಉಡುಪಿಯ ಸಾಂಸ್ಕೃತಿಕ ಲೋಕದಲ್ಲಿ ಸಾರಥಿ, ರಥಿಕ ಎಂದೇ ಖ್ಯಾತಿಯ ಪ್ರೊ. ಹೆರಂಜೆ ಕೃಷ್ಣಭಟ್ಟ ಅವರ ಬದುಕು-ಬರೆಹಗಳ ಸಂಪೂರ್ಣ ವಿವರವನ್ನು ಒಳಗೊಂಡ ಕೃತಿ ಇದು. ಈ ಕೃತಿಗೆ ಡಾ. ನಾ. ಮೊಗಸಾಲೆ ಅವರು ಗೌರವ ಸಂಪಾದಕರಿದ್ದು, ಡಾ. ಬಿ. ಜನಾರ್ದನ ಭಟ್ ಅವರು ಸಂಪಾದಕರು.
ಲೇಖಕ ನೀರ್ಕಜೆ ತಿರುಮಲೇಶ್ವರ ಭಟ್ ಅವರು ಮೂಲತಃ ಬಂಟ್ವಾಳ ತಾಲೂಕಿನ ನೀರ್ಕಜೆಯವರು. ತಂದೆ - ನೀರ್ಕಜೆ ಮಹಾಲಿಂಗ ಭಟ್ಟ, ತಾಯಿ - ದೇವಕಿ ಅಮ್ಮ. ವಿಟ್ಲದ ವಿಠಲ ಹೈಸ್ಕೂಲಿನಲ್ಲಿ ಎಸ್.ಎಸ್.ಎಲ್.ಸಿ ಪೂರ್ಣಗೊಳಿಸಿ, ಉಡುಪಿಯ ಎಂ.ಜಿ.ಎಂ ಕಾಲೇಜಿನಲ್ಲಿ ಇಂಟರ್ ಮೀಡಿಯಟ್ ಸೈನ್ಸ್ ಓದಿಕೊಂಡರು, ಅದೇ ಕಾಲೇಜಿನಲ್ಲಿ ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಇತಿಹಾಸದಲ್ಲಿ ಬಿ.ಎ ಪದವಿ ಪಡೆದರು. 1959ರಲ್ಲಿ ಆಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಎಂ.ಎ ಪದವಿ, ಜರ್ಮನಿಯ ಮ್ಯೂನಿಕ್ ವಿಶ್ವವಿದ್ಯಾಲಯದಲ್ಲಿ ಗ್ರೋಸೆಸ್ ಶ್ಟ್ರಾಖ್ ಡಿಪ್ಲೋಮಾ ಪಡೆದರು. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಡಾ.ಎಸ್.ಬಿ.ಶೋತ್ರಿ ಮಾರ್ಗದರ್ಶನದಲ್ಲಿ ಪಿಎಚ್.ಡಿ ಪದವಿ ಪಡೆದಿದ್ದಾರೆ. ಎಂ.ಜಿ.ಎಂ ಕಾಲೇಜಿನಲ್ಲಿ ಇಂಗ್ಲಿಷ್ ವಿಭಾಗದ ...
READ MORE