ನಿರಂಜನ

Author : ಧನಂಜಯ ಕುಂಬ್ಳೆ

Pages 52

₹ 45.00




Year of Publication: 2015
Published by: ಕನ್ನಡ ಸಂಘ ಕಾಂತಾವರ(ರಿ)
Address: ಕಾಂತಾವರ, ಕಾರ್ಕಳ, ಉಡುಪಿ ಜಿಲ್ಲೆ- 574129

Synopsys

ಪ್ರಗತಿಪಥ ತೋರಿದ ಸೃಜನಶೀಲ ಚಿಂತಕ ‘ನಿರಂಜನ’ ಕೃತಿಯು ಕಾಂತಾವರದ ಕನ್ನಡ ಸಂಘ ಪ್ರಕಟಿಸಿದ 'ನಾಡಿನ ನಮಸ್ಕಾರ' ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯಲ್ಲಿ ಪ್ರಕಟವಾಗಿದೆ. ಈ ಕೃತಿಯನ್ನು ಲೇಖಕ ಡಾ. ಧನಂಜಯ ಕುಂಬ್ಳೆ ಅವರು ರಚಿಸಿದ್ದಾರೆ. ಪ್ರಗತೀಪರ ಲೇಖಕ, ಪತ್ರಕರ್ತ ನಿರಂಜನ ಅವರ ಬದುಕು-ಬರಹಗಳ ಮೇಲೆ ಬೆಳಕು ಚೆಲ್ಲುವ ಈ ಕೃತಿ ಅವರ ಬಾಲ್ಯ, ಹದಿಹರಯ, ನಿಲುಮೆ ನಿಷ್ಠೆ, ಅನುಪಮ ಸಾಂಗತ್ಯ, ಸಾಹಿತ್ಯಯಾನ, ನಿರಂಜನ ಸಾಹಿತ್ಯ, ನಿರಂಜನರ ಆರಂಭಿಕ ರಚನೆಗಳು, ಕಥೆಗಾರ, ನಾಟಕಗಾರ, ಕಾದಂಬರಿಕಾರ, ಅನುವಾದ ಸಾಹಿತ್ಯ, ಸಂಪಾದಕರಾಗಿ ನಿರಂಜನರ ಸೃಜನಶೀಲ ವ್ಯಕ್ತಿತ್ವದ ಕುರಿತ ಮಾಹಿತಿಗಳನ್ನು ಒಳಗೊಂಡಿದೆ.

About the Author

ಧನಂಜಯ ಕುಂಬ್ಳೆ
(11 December 1975)

ಲೇಖಕ ಧನಂಜಯ ಕುಂಬ್ಳೆ ಅವರು ಕಾಸರಗೋಡು ಜಿಲ್ಲೆಯ ಕುಂಬಳೆಯಲ್ಲಿ  1975 ಡಿಸೆಂಬರ್ 11ರಂದು ಜನಿಸಿದರು. ಪ್ರಸ್ತುತ ದ.ಕ ಜಿಲ್ಲೆಯ ಮೂಡುಬಿದಿರೆ ನಿವಾಸಿ. ಕಲ್ಲಿಕೋಟೆ ವಿಶ್ವವಿದ್ಯಾಲಯದಲ್ಲಿ ಬಿ. ಎ. ಪದವಿಯನ್ನು ಮೂರನೇ ರ್‍ಯಾಂಕ್‌ನೊಂದಿಗೆ ಹಾಗೂ ನಂತರ 1999ರಲ್ಲಿ ಕಣ್ಣೂರು ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿಯನ್ನೂ ಸಹ ತೃತಿಯ ರ್‍ಯಾಂಕ್‌ನೊಂದಿಗೆ ಪೂರೈಸಿದರು. ‘ಅರುಣಾಬ್ಜ ಮತ್ತು ಕುಮಾರವ್ಯಾಸ: ತೌಲನಿಕ ಅಧ್ಯಯನ’ ಅವರ ಪಿಎಚ್‌.ಡಿ ಗ್ರಂಥ. ಪುತ್ತೂರಿನ ವಿವೇಕಾನಂದ ಮಹಾವಿದ್ಯಾಲಯ, ಮೂಡುಬಿದಿರೆಯ ಆಳ್ವಾಸ್ ಪದವಿ ಕಾಲೇಜುಗಳಲ್ಲಿ ಕನ್ನಡ ಉಪನ್ಯಾಸಕರಾಗಿದ್ದ ಇವರು ಈಗ  ಮಂಗಳೂರು ವಿಶ್ವವಿದ್ಯಾಲಯದ ಎಸ್ವಿಪಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಅವರ ಮೊದಲ ...

READ MORE

Related Books