ಧೀಮಂತ ಪತ್ರಕರ್ತ ವಡ್ಡರ್ಸೆ ರಘುರಾಮ ಶೆಟ್ಟಿ

Author : ಉಪ್ಪುಂದ ಚಂದ್ರಶೇಖರ ಹೊಳ್ಳ

Pages 56

₹ 45.00




Year of Publication: 2017
Published by: ಕನ್ನಡ ಸಂಘ, ಕಾಂತಾವರ
Address: ಕೆ.ಬಿ. ಜಿನರಾಜ ಹೆಗ್ಡೆ ಸ್ಮಾರಕ ಕನ್ನಡ ಭವನ, ಕಾಂತಾವರ, ಅಂಚೆ-ಕಾಂತಾವರ-574129, ಕಾರ್ಕಳ ತಾಲ್ಲೂಕು, ಉಡುಪಿ ಜಿಲ್ಲೆ
Phone: 8548933733

Synopsys

ಕಾಂತಾವರ ಕನ್ನಡ ಸಂಘದ ’ನಾಡಿಗೆ ನಮಸ್ಕಾರ’ ಸರಣಿಯಲ್ಲಿ ಪ್ರಕಟವಾಗುತ್ತಿರುವ 194ನೇ ಪುಸ್ತಕವಿದು. ’ಮುಂಗಾರು’ ಪತ್ರಿಕೆಯ ಮೂಲಕ ಕನ್ನಡ ಪತ್ರಿಕೋದ್ಯಮದಲ್ಲಿ ವಿಶಿಷ್ಟ ಸಾಧನೆ ಮಾಡಿದವರು ವಡ್ಡರ್ಸೆ. ಪ್ರಜಾವಾಣಿ ಪತ್ರಿಕೆಯಲ್ಲಿ ಎರಡು ದಶಕಗಳ ಕಾಲ ಪತ್ರಕರ್ತರಾಗಿದ್ದವರು ’ಸ್ಕೂಪ್‌’ ಸುದ್ದಿ ಪ್ರಕಟಿಸುವುದಕ್ಕಾಗಿ ಹೆಸರುವಾಸಿಯಾಗಿದ್ದರು. ’ಓದುಗರ ಒಡೆತನದ ಪತ್ರಿಕೆ’ಯ ಪರಿಕಲ್ಪನೆಯ ಭಾಗವಾಗಿ ’ಮುಂಗಾರು’ ಆರಂಭಿಸಿದರು. ನಂತರ ಕೃಷಿಕರಾಗಿ ಜೀವನ ನಡೆಸಿದರು. ದೇವರಾಜು ಅರಸರ ಬಗ್ಗೆ ಜೀವನ ಚರಿತ್ರೆ ರಚಿಸಿದ್ದಾರೆ. ವಡ್ಡರ್ಸೆ ಅವರ ಜೀವನ ಸಾಧನೆಯನ್ನು ಈ ಕಿರು ಪುಸ್ತಿಕೆಯ ಮೂಲಕ ನೀಡಲಾಗಿದೆ.

About the Author

ಉಪ್ಪುಂದ ಚಂದ್ರಶೇಖರ ಹೊಳ್ಳ

ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಸಾಹಿತಿ ಉಪ್ಪುಂದ ಚಂದ್ರಶೇಖರ ಹೊಳ್ಳರು (ಜನನ 1946) ಉಡುಪಿಯಲ್ಲಿ 74ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಬಹಳ ಯಶಸ್ವಿಯಾಗಿ ಸಂಘಟಿಸಿದ್ದರು. ಅಂಚೆ ಮತ್ತು ತಂತಿ ಇಲಾಖೆಯಲ್ಲಿ ನೌಕರಿಯಲ್ಲಿದ್ದ ಉಪ್ಪುಂದ ಚಂದ್ರಶೇಖರ ಹೊಳ್ಳರು ನಂತರ ಅದನ್ನು ಬಿಟ್ಟು ಉದ್ಯಮಿಯಾಗಿ ದಾವಣಗೆರೆಯಲ್ಲಿ ಕಟ್ಟಡ ನಿರ್ಮಾಣ ಸಂಸ್ಥೆ ನಡೆಸಿದ್ದರು. ಹೊಳ್ಳರು ಕಾವ್ಯ, ಸಾಹಿತ್ಯ, ಸಂಘಟನೆಗಳಲ್ಲಿ ತೊಡಗಿಸಿಕೊಡಿದ್ದರು. ಅವರ ಮಡದಿ ವರಮಹಾಲಕ್ಷ್ಮಿ ಹೊಳ್ಳ ಅವರು ಅಂಕಣಕಾರ್ತಿ, ಕತೆಗಾರ್ತಿ. ಗ್ರಾಮೀಣಾಭಿವೃದ್ಧಿಯ ಕನಸಿನೊಂದಿಗೆ ಹುಟ್ಟೂರಿಗೆ ಬಂದ ಅವರುಮರಳಿದರು ಶಂಕರ ಕಲಾಮಂದಿರ, ಸೂರ್ಯನಾರಾಯಣ ಗ್ರಂಥ ಭಂಡಾರ, ಮತ್ತು ...

READ MORE

Related Books