ಕಾಂತಾವರ ಕನ್ನಡ ಸಂಘದ ನಾಡಿಗೆ ನಮಸ್ಕಾರ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯ ಎಂಟನೆಯ ಪುಸ್ತಕ ರಂಗ ಕರ್ಮಿ ಸದಾನಂದ ಸುವರ್ಣ. ಚಲನಚಿತ್ರರಂಗದ ಅತ್ಯುತ್ತಮ ಸ್ವರ್ಣಕಮಲ ಪ್ರಶಸ್ತಿ ಪಡೆದಿರುವ ಸದಾನಂದ ಸುವರ್ಣ ಅವರು ನಿರ್ದೇಶಕ, ನಿರ್ಮಾಪಕ, ನಟ. ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿಯಲ್ಲಿ ಹುಟ್ಟಿದ ಅವರು ಬೆಳೆದದ್ದು ಮುಂಬಯಿಯಲ್ಲಿ. ಅಲ್ಲಿಯೇ ಬದುಕು ಮತ್ತು ರಂಗಭೂಮಿಯ ಎರಡನ್ನೂ ಕಟ್ಟಿದವರು. ರಂಗಭೂಮಿಯ ಸಾಧಕರಲ್ಲಿ ಮುಂಚೂಣಿಯಲ್ಲಿರುವ ಅವರಿಗೆ ಹೊಸ ಸಾಧ್ಯತೆಗಳ ಚಿಂತನೆಯೇ ಬದುಕು. ಮುಂಬಯಿಯಲ್ಲಿ ರಂಗಶಿಕ್ಷಣ ಕೇಂದ್ರವನ್ನು ಸ್ಥಾಪಿಸಿರುವ ಅವರಿಂದ ಹಲವು ನಾಟಕಗಳು, ಉತ್ತಮ ಕಲಾತ್ಮಕ ಚಿತ್ರಗಳು ಸೃಷ್ಟಿಯಾದುವು. ಗುಡ್ಡದ ಭೂತ ಎನ್ನುವ ಟೆಲಿಚಿತ್ರ, ಡಾ. ಶಿವರಾಮ ಕಾರಂತ, ಬ್ರಹ್ಮಶ್ರೀ ನಾರಾಯಣಗುರು ಅವರ ಸಾಕ್ಷ್ಯಚಿತ್ರಗಳು ಅವರು ಕಿರುತೆರೆಗೆ ನೀಡಿದ ದೊಡ್ಡ ಕೊಡುಗೆ. ಸುವರ್ಣಗಿರಿ ಪ್ರಕಾಶನ, ಸದಾನಂದ ಸುವರ್ಣ ಪ್ರತಿಷ್ಠಾನಗಳ ಮೂಲಕ ಸಾಂಸ್ಕೃತಿಕವಾಗಿ ತೊಡಗಿಸಿಕೊಂಡಿರುವ ಸುವರ್ಣರದ್ದು ಅದಮ್ಯ ಚೇತನ, ಸರಳ ನಿರಾಡಂಬರ ಚಿತ, 75ರ ಇಳಿವಯಸ್ಸಿನಲ್ಲೂ ರಂಗಭೂಮಿಯ ಬಗ್ಗೆಯೇ ಕನಸು ಕಾಣುವ ಅವರು ರಂಗಭೂಮಿಯ ಜಂಗಮ. ಸುವರ್ಣ ಅವರನ್ನು ಕುರಿತ ಕಿರು ಪರಿಚಯ ನೀಡುವ ಕೃತಿಯಿದು.
©2024 Book Brahma Private Limited.