ಅಗ್ರಾಳ ಪುರಂದರ ರೈ ಅವರು ಕೃಷಿ, ಸಾಹಿತ್ಯ, ಪತ್ರಿಕೆ, ಸ್ವಾತಂತ್ರ್ಯ ಹೋರಾಟ, ಗಾ೦ಧೀವಾದ, ಅಧ್ಯಾಪನ, ರೈತ ಸ೦ಘಟನೆ, ಶ್ಯಾನುಭೋಗತನ, ಪಠೇಲಿಕೆ, ವ್ಯಾಪಾರ, ಕಲೆ, ಭಾಷಣ, ತುಳು, ಮನೆಮದ್ದು ಹೀಗೆ ಹತ್ತು ಹಲವು ಪ್ರಕಾರಗಳಲ್ಲಿ ಅವರ ಕಾರ್ಯಕ್ಷೇತ್ರ ಹರಡಿಕೊಂಡಿತ್ತು. ಅವರು ಕರಾವಳಿ ಪರಿಸರದ ಹಳ್ಳಿ ಜೀವನದಲ್ಲಿ ನುರಿತ ಅರಿತ ಬರಹಗಾರರಾಗಿದ್ದರು. ಬೇರೆ ಬೇರೆ ಪತ್ರಿಕೆಗಳಲ್ಲಿ ಅವರ ನಾನಾ ವಿಧವಾದ ಬರಹಗಳು ಆಗಾಗ ಪ್ರಕಟವಾಗುತ್ತಿದ್ದವು. ಸಣ್ಣ ಕತೆ, ಲಘುಹಾಸ್ಯ, ಪ್ರಬಂಧ, ವಿಚಾರ, ವಿನೋದ, ವ್ಯಂಗ್ಯ, ಚುಟುಕ, ಕವನಗಳು ಸಾಹಿತ್ಯಾಕಾಶದಲ್ಲಿ ಆಗಾಗ ಮಿನುಗಿವೆ. ಪಿ.ಆರ್. ಅಗ್ರಾಳ, ಪಿ.ಆರ್.ಎ. ಮೊದಲಾದ ಹೆಸರುಗಳಿ೦ದ ಅವರು ವಾಚಕ ಜನಕ್ಕೆ ಪರಿಚಿತರಾಗಿದ್ದರು. ಜೀವನದ ಪ್ರತಿಯೊಂದು ಘಟನೆಯನ್ನೂ ಬರೆದು ಬರೆದು, ತಿಕ್ಕಿ ತೀಡಿ ನೋಡುವ ಕುತೂಹಲ ಅವರಿಗಿತ್ತು. ಅವರ ಅನುಭವಗಳನ್ನು ಜನತೆಗೆ ರಸವತ್ತಾದ ತನ್ನದೇ ಆದ ಶೈಲಿಯಿಂದ ನೀಡುವ ಉತ್ಸಾಹವುಳ್ಳವರಾಗಿದ್ದರು.
©2024 Book Brahma Private Limited.