ಕವಿ- ವಿದ್ವಾಂಸರಾಗಿದ್ದ ಟಿ. ಕೇಶವ ಭಟ್ಟ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ’ಕನ್ನಡ ಸಾಹಿತ್ಯ ಪರಿಷತ್ಪತ್ರಿಕೆ’ ಹಾಗೂ ಬಿ.ಎಂ.ಶ್ರೀ ಪ್ರತಿಷ್ಠಾನದ ವಿದ್ವತ್ ಪತ್ರಿಕೆ ‘ಕರ್ನಾಟಕ ಲೋಚನ’ದ ಪ್ರಧಾನ ಸಂಪಾದಕರಾಗಿದ್ದರು. ಕಿರಿಯರ ವಿಶ್ವಕೋಶ ‘ಜ್ಞಾನ ಗಂಗೋತ್ರಿ’ಯ ಸಂಪಾದಕ ಮಂಡಲಿಯ ಸದಸ್ಯರಾಗಿದ್ದ ಅವರು ಎಚ್.ಎಲ್. ನಾಗೇಗೌಡರ ಸಂಪಾದಕರಾಗಿದ್ದ ‘ಜಾನಪದ ಕೋಶ’ ರಚನಾ ಸಮಿತಿಯ ಸದಸ್ಯರಾಗಿದ್ದರು. ಕಾವ್ಯ ಕುರಿತ ಸತ್ತ್ವಾಲೋಕನಂ (ಚಂಪೂಕಾವ್ಯ) ಶ್ರೀ ಚನ್ನವೀರಶರಣ ಕಥಾಮೃತ (ವಾರ್ಧಕ ಷಟ್ಪದಿ); ಕನ್ನಡ ಪ್ರಾಚೀನ ಸಾಹಿತ್ಯ ಲಕ್ಷಣಗಳು-ಮರುನೋಟ, ದ.ಕ. ಜಿಲ್ಲಾ ಜಾನಪದಗೀತೆಗಳು ಎಂಬ ಸಂಶೋಧನಾ ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಲಂಕಾದಹನ, ಪಂಚವಟಿ ವಾಲಿ ಸುಗ್ರೀವ ಕಾಳಗ ಮುಂತಾದ ಯಕ್ಷಗಾನ ಪ್ರಸಂಗಗಳು; ಭಾಷಾ ದೀಪಿಕೆ, ಭಾಷಾಭಾಸ್ಕರ, ಭಾವಾರ್ಥ ವಿಸ್ತರಣ, ಕಾವ್ಯ ಪದಮಂಜರಿ ಸೇರಿದಂತೆ ಹಲವು ಶಬ್ದಕೋಶ-ಶೈಕ್ಷಣಿಕ ಕೃತಿಗಳನ್ನು ಪ್ರಕಟಿಸಿದ್ದಾರೆ. ದಿಲೀಪ, ಕಾರ್ತಿಕೇಯ, ವಿಶ್ವಕರ್ಮ, ಪಾರ್ವತಿ , ಗಾಂಧಾರಿ, ಗೋವಿನ ಹಾಡು ಮೊದಲಾದವು ಬಾಲ ಸಾಹಿತ್ಯ ಕೃತಿಗಳು. ಕಾಂತಾವರ ಕನ್ನಡ ಸಂಘ ಪ್ರಕಟಿಸುತ್ತಿರುವ ನಾಡಿಗೆ ನಮಸ್ಕಾರ ಸರಣಿಯ 89ನೇ ಕೃತಿಯಿದು.
©2024 Book Brahma Private Limited.