ಕಾಂತಾವರದ ಕನ್ನಡ ಸಂಘವು ಪ್ರಕಟಿಸುತ್ತಿರುವ ನಾಡಿಗೆ ನಮಸ್ಕಾರ ಸರಣಿಯಲ್ಲಿ ಪ್ರಕಟವಾಗುತ್ತಿರುವ ಪುಸ್ತಕ ’ಪ್ರಯೋಗಶೀಲ ರಂಗಕರ್ಮಿ ಕೆ.ಕೆ.ಸುವರ್ಣ’. ರಂಗಭೂಮಿಗೆ ಸುವರ್ಣ ಅವರು ನೀಡಿರುವ ಕೊಡುಗೆಯನ್ನು ವಿವರಿಸುವ ಭರತಕುಮಾರ ಅವರು ಕೆ.ಕೆ. ಸುವರ್ಣ ಅವರ ಜೀವನದ ಘಟನೆಗಳನ್ನು ಬದುಕು ಕಟ್ಟಿಕೊಂಡ ಕ್ರಮವನ್ನು ವಿವರಿಸಿದ್ದಾರೆ. ನಾಡಿಗೆ ನಮಸ್ಕಾರ ಸರಣಿಯಲ್ಲಿ ಪ್ರಕಟವಾಗಿರುವ 246ನೇ ಪುಸ್ತಕ.
ಮುಂಬಯಿಯ ಸಾಂಸ್ಕೃತಿಕ ರಾಯಭಾರಿ, ಪ್ರತಿಭಾಶಾಲಿ ರಂಗ ನಿರ್ದೇಶಕ, ಚಿಂತಕ ಡಾ.ಭರತ್‌ಕುಮಾರ್ ಪೊಲಿಪು. ಬಹುಭಾಷಿಕ ಸಂವೇದನೆಯನ್ನು ಮೈಗೂಡಿಸಿಕೊಂಡಿರುವ ಅವರು ಕಳೆದ ಮೂರು ದಶಕಗಳಿಂದ ಮುಂಬೈ ಕನ್ನಡ ರಂಗಭೂಮಿಗೆ ಹೊಸನೀರು ಹರಿಸಿದವರಲ್ಲಿ ಮುಖ್ಯರು. ತಮ್ಮ ಪಿಎಚ್.ಡಿ. ಗಾಗಿ ಅವರು ಮುಂಬಯಿ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ ಮಹಾಪ್ರಬಂಧ 'ಮುಂಬೈ ಕನ್ನಡ ರಂಗಭೂಮಿ ಒಂದು ತೌಲನಿಕ ಅಧ್ಯಯನ' ಗ್ರಂಥರೂಪದಲ್ಲಿ ಪ್ರಕಟವಾಗಿ ರಂಗಭೂಮಿಯ ಬಹುಮುಖ್ಯ ಆಕರಗ್ರಂಥಗಳಲ್ಲಿ ಒಂದೆಂದು ಪರಿಗಣಿತವಾಗಿದೆ. ನಾಡಿಗೆ ನಮಸ್ಕಾರ ಮಾಲೆಗಾಗಿ 'ಡಾ. ವಿಶ್ವನಾಥ ಕಾರ್ನಾಡ್' ಕೃತಿ ರಚಿಸಿದ್ದಾರೆ. ಮುಂಬೈ ಕರ್ನಾಟಕ ಸಂಘದ ಕಾರ್ಯದರ್ಶಿಯಾಗಿರುವ ಭರತಕುಮಾರ ಪೊಲಿಪು ಅವರು ವೃತ್ತಿಯಿಂದ ಬ್ಯಾಂಕ್ ಅಧಿಕಾರಿ, ರಂಗಭೂಮಿ ...
READ MORE