ಸಣ್ಣಕತೆಗಾರ ರಮಾನಂದ ಘಾಟೆ ಅವರನ್ನು ಕುರಿತ ಪುಸ್ತಕವಿದು. ಕಾಂತಾವರದ ಕನ್ನಡ ಸಂಘವು ಪ್ರಕಟಿಸುತ್ತಿರುವ ನಾಡಿಗೆ ನಮಸ್ಕಾರ ಸರಣಿಯಲ್ಲಿ ಪ್ರಕಟವಾದ 176ನೇ ಕೃತಿಯಿದು. ಕನ್ನಡ ನವೋದಯ ಸಾಹಿತ್ಯದ ಗದ್ಯ ಲೇಖಕ ರಮಾನಂದ ಅವರು ಕನ್ನಡದ ಮರೆಯಬಾರದ ಕತೆಗಾರರಲ್ಲಿ ಒಬ್ಬರು. ರಮಾನಂದ ಘಾಟೆಯವರ ಸಣ್ಣಕತೆಗಳ ನಾಯಕಿಯ ಹೆಸರು ಸೀತಾರತ್ನ. ಆ ಕಾಲದಲ್ಲಿ ಘಾಟೆಯವರು ಇಂಗ್ಲಿಷಿನ ಪಿ.ಜಿ.ವುಡ್‌ಹೌಸ್ ಸೃಷ್ಟಿಸಿದ ’ಜೀವ್ಸ್’ ಪಾತ್ರದಂತೆ ಘಾಟೆಯವರು ’ಸೀತಾರತ್ನ’ ಎಂಬ ಪಾತ್ರ ಸೃಷ್ಟಿಸಿದ್ದರು. ಆ ಕಾಲದ ಪತ್ತಿಕೆಗಳಲ್ಲಿ ಘಾಟೆಯವರ ಈ ಪ್ರಯತ್ನದ ಬಗ್ಗೆ ಶ್ಲಾಘನೆ ಪ್ರಕಟವಾಗಿತ್ತು. ಕಾಂತಾವರದ ಕನ್ನಡ ಸಂಘ ಪ್ರಕಟಿಸುತ್ತಿರುವ ನಾಡಿಗೆ ನಮಸ್ಕಾರ ಸರಣಿಯ 176ನೇ ಕೃತಿಯಿದು.
©2025 Book Brahma Private Limited.