ಕಾಂತಾವರ ಕನ್ನಡ ಸಂಘದ 'ನಾಡಿಗೆ ನಮಸ್ಕಾರ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯ 206ನೇ ಪುಸ್ತಕ ಸಾರಾ ಅಬೂಬಕರ್. ಜೀವಪರ ಚಿಂತಕಿ-ಸಾಹಿತಿ ಸಾರಾ ಅಬೂಬಕರ್ ಹಂಪಿ ಕನ್ನಡ ವಿಶ್ವವಿದ್ಯಾಲಯದ 'ನಾಡೋಜ' ಗೌರವವನ್ನು ಪಡೆದಿದ್ದಾರೆ. ಸಾರಾ ಅಬೂಬಕರ್ ಕನ್ನಡದ ಖ್ಯಾತ ಲೇಖಕಿ, ಸೀಪರ-ಜೀವಪರ ಚಿಂತಕಿ ಹಾಗೂ ಹೋರಾಟಗಾರ್ತಿ. ದಟ್ಟವಾದ ಜೀವನಾನುಭವವುಳ್ಳ ಸಾರಾ ಅವರು ದಿಟ್ಟ ನಿಲುವಿನಿಂದ ಬದುಕಿಗೆ ನಿಷ್ಠವಾದ ಹಾಗೂ ಶೋಷಿತರ ನೋವನ್ನು ದಾಖಲಿಸುವ ಅಮೂಲ್ಯ ಕತೆ, ಕಾದಂಬರಿಗಳನ್ನು ಕನ್ನಡಕ್ಕೆ ನೀಡಿದ್ದಾರೆ. ಮಲಯಾಳಂ ಮಾತೃಭಾಷೆಯ ಸಾರಾ ಅವರು ಕನ್ನಡ ಸಾಹಿತ್ಯಕ್ಕೆ ನೀಡಿರುವ ಮಹತ್ವದ ಕೊಡುಗೆಯನ್ನು ಕನ್ನಡನಾಡು ಕೃತಜ್ಞತೆಯಿಂದ ಗುರುತಿಸಿದೆ.
©2025 Book Brahma Private Limited.