ಕಾಂತಾವರ ಕನ್ನಡ ಸಂಘದ 'ನಾಡಿಗೆ ನಮಸ್ಕಾರ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯ 232ನೇ ಪುಸ್ತಕ ನಾಟ್ಯಾಚಾರ್ಯ ಕುಮಾರ ವೆಂಕಣ್ಣ. ಸ್ವಾತಂತ್ರ್ಯ ಹೋರಾಟಗಾರ, ಸಾಹಿತಿ ನಾಟ್ಯಾಚಾರ್ಯ ಕುಮಾರ ವೆಂಕಣ್ಣ ಕುಮಾರ ವೆಂಕಣ್ಣ ಎಂಬ ಕಾವ್ಯನಾಮದಲ್ಲಿ ಬರೆಯುತ್ತಿದ್ದ ವೆಂಕಟ್ರಾವ್ ಕ್ಯೂಲೋರ್ಕರ್ (೧೯೧೬-೧೯೯೪) ಬಂಟ್ವಾಳದ ಬಳಿಯ ಕ್ಯೂಲದವರು. 'ಬಣ್ಣದ ಮಾಲಿಂಗ', 'ಗ್ಯಾಸ್ ಬಸ್', “ಕಲ್ಯಾಣಿ', 'ನಾಗವಲ್ಲಿ', 'ಪ್ರಣಯ ಪಕ್ಷಿ', 'ನಾಟ್ಯ ಸರಸ್ವತಿ', 'ಪ್ರೇಮ ಜಾಲ', 'ಬಣ್ಣದ ಬದುಕು', 'ಬೀದಿಯ ದೀಪ', 'ಮಾಯಾ', “ಹರಿದ ಗೆಜ್ಜೆ' ಇತ್ಯಾದಿ ಕಾದಂಬರಿಗಳನ್ನು ಕನ್ನಡಕ್ಕೆ ನೀಡಿದ ಪ್ರಗತಿಶೀಲ ಲೇಖಕ ಕುಮಾರ ವೆಂಕಣ್ಣ ವಿದ್ಯಾರ್ಥಿ ದೆಸೆಯಲ್ಲಿಯೇ ಕವಿತೆ, ಕತೆ, ಲೇಖನಗಳನ್ನು ಬರೆಯುತ್ತಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದ ಅವರು ನಂತರ ಬೆಂಗಳೂರಿನಲ್ಲಿ ಪತ್ರಕರ್ತರಾಗಿ, 'ಸ್ವತಂತ್ರ ಕರ್ನಾಟಕ', 'ಉಷಾ', 'ವಿಶ್ವ ಕರ್ನಾಟಕ' ಪತ್ರಿಕೆಗಳ ಸಂಪಾದಕೀಯ ಬಳಗದಲ್ಲಿ ಕೆಲಸ ಮಾಡಿದ್ದರು. ನಾಟ್ಯ ಕಲಾವಿದರೂ ಕಲಾ ಚಿಂತಕರೂ ಆಗಿದ್ದ ಅವರಿಗೆ 'ನಾಟ್ಯಾಚಾರ್ಯ' ಎಂಬ ಬಿರುದು ಸಂದಿತ್ತು.
©2025 Book Brahma Private Limited.