ಕಾಂತಾವರ ಕನ್ನಡ ಸಂಘದ ನಾಡಿಗೆ ನಮಸ್ಕಾರಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯ ಏಳನೆಯ ಪುಸ್ತಕ ಅಭಿನವ ಧನ್ವಂತರಿ ಡಾ. ಮಳಿಯೆ ಗೋಪಾಲಕೃಷ್ಣರಾಯರು. ಪರಂಪರಾಗತ ಆಯುರ್ವೇದ ಕ್ಷೇತ್ರವನ್ನು ಶ್ರದ್ದೆಯಿಂದ ರಕ್ಷಿಸಿ ಬೆಳೆಸಿದ ಕೆಲವೇ ಭಾರತೀಯ ಪ್ರಮುಖರಲ್ಲಿ ಮೂಡಬಿದ್ರೆ ಬಳಿಯ ಅಶ್ವತ್ಥಪುರದ ಡಾ. ಚಳಿಗೆ ಗೋಪಾಲಕೃಷ್ಣರಾಯರು ಒಬ್ಬರು. ಯುಗಚೇತನ ಪಂಡಿತ ತಾರಾನಾಥರ ಶಿಷ್ಯರಾದ ಗೋಪಾಲಕೃಷ್ಣರಾಯರು ಆಯುರ್ವೇದ ಶಾಸ್ತ್ರವನ್ನು ತಮ್ಮ ಪತ್ರಿಕೆಗಳು ಹಾಗೂ ಕೃತಿಗಳಲ್ಲಿ ಕೂಡ ಜನಪ್ರಿಯಗೊಳಿಸಿದವರು. ಕನ್ನಡದ ಮೊದಲನೆಯ ಕಾಮವಿಜ್ಞಾನ ಪತ್ರಿಕೆಯಾದ 'ಕಲಿಯುಗ' ಮತ್ತು 'ಪ್ರೇಮಕಲಾ', 'ಪೌರುಷ', 'ಸ್ವರತಿ', 'ಲೈಂಗಿಕ ಸಮಸ್ಯೆಗಳು' ಮತ್ತು 'ಗುಹ್ಯರೋಗಗಳು' ಎಂಬ ಕೃತಿಗಳಲ್ಲಿ ಸ್ವಸ್ಥ ಜೀವನಕ್ಕಾಗಿ ಮಾರ್ಗದರ್ಶನ ನೀಡಿದ ರಾಯರು, ಬೆಂಗಳೂರು ಆಯುರ್ವೇದಿಕ್ ಕಾಲೇಜಿನ ಸ್ಥಾಪಕ ಪ್ರಿನ್ಸಿಪಾಲರಾಗಿ ಆಯುರ್ವೇದ ಶಿಕ್ಷಣ ಕ್ಷೇತ್ರಕ್ಕೆ ಭದ್ರ ಬುನಾದಿ ಹಾಕಿಕೊಟ್ಟವರು ಚಿಕಿತ್ಸೆಯಲ್ಲಿ ಅಭಿನವ ಧನ್ವಂತರಿಯಾಗಿ ಈ ನಾಡಿನ ಸೇವೆ ಮಾಡಿದವರು. ಅವರ ಜೀವನ ಚರಿತ್ರೆಯಿದು.
©2024 Book Brahma Private Limited.