ಕಾಂತಾವರ ಕನ್ನಡ ಸಂಘವು ಪ್ರಕಟಿಸುತ್ತಿರುವ ನಾಡಿಗೆ ನಮಸ್ಕಾರ ಸರಣಿಯ 101ನೇ ಪುಸ್ತಕ ಬಂಟಕಲ್ಲು ಲಕ್ಷ್ಮೀನಾರಾಯಣ ಶರ್ಮ. ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಗಾಂಧೀವಾದಿ ಬಂಟಕಲ್ಲು ಲಕ್ಷ್ಮೀನಾರಾಯಣ ಶರ್ಮ ಅವರು ಪ್ರಮುಖ ಕೃಷಿಕ ಕೂಡ. ಕೆ.(ಕೋಟೆ, ಕಟಪಾಡಿ) ಲಕ್ಷ್ಮಿನಾರಾಯಣ ಶರ್ಮರ ಬದುಕು ಸಾಧನೆಯನ್ನು ಈ ಕೃತಿ ಕಟ್ಟಿಕೊಡುತ್ತದೆ.
ಕತೆಗಾರರಾಗಿರುವ ಬಿ. ಸೀತಾರಾಮ ಭಟ್ ನಿವೃತ್ತ ಇತಿಹಾಸ ಪ್ರಾಧ್ಯಾಪಕರು. ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಹಲವಾರು ಇತಿಹಾಸ ಪಠ್ಯಪುಸ್ತಕ ರಚಿಸಿರುವ ಅವರು 'ಅಗೋಚರ' ಮತ್ತು 'ಮನೆಯೊಳಗೊಂದು ಖಾಲಿ ಕೋಣೆ' ಎಂಬ ಎರಡು ಕತಾ ಸಂಕಲನ ಪ್ರಕಟಿಸಿದ್ದಾರೆ. ತಮ್ಮ ಚಾರಣ ಅನುಭವದ ಲೇಖನಗಳನ್ನು ಪತ್ರಿಕೆಗಳಲ್ಲಿ ಪ್ರಕಟಿಸಿದ್ದಾರೆ. ಅವರ ಪ್ರವಾಸದ ಅನುಭವ ಬರಹಗಳ ಕೃತಿ ’ಹಬ್ಬಿದಾ ಮಲೆ ಮಧ್ಯದೊಳಗೆ'. 'ಅಮೆಜಾನ್', 'ಪಿರಮಿಡ್ಡುಗಳು' ಮತ್ತು 'ಅನ್ವೇಷಣೆಯ ಹಾದಿಯಲ್ಲಿ’ ಪ್ರಕಟಿತ ಕೃತಿಗಳು. ...
READ MORE