ಕಾಂತಾವರ ಕನ್ನಡ ಸಂಘದ ನಾಡಿಗೆ ನಮಸ್ಕಾರಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯ ನಾಲ್ಕನೆಯ ಪುಸ್ತಕ ಜನಾರ್ದನ ಗುರ್ಕಾರ. ದಕ್ಷಿಣ ಕನ್ನಡದ ಬದುಕು ಮತ್ತು ಪ್ರಕೃತಿಯನ್ನು ತಮ್ಮ ಕಾದಂಬರಿಗಳಲ್ಲಿ ಚಿತ್ರಿಸಿ ಸಾಹಿತ್ಯ ಕೃತಿಗಳಾಗಿಸಿದ ಕಾದಂಬರಿಕಾರ ಜನಾರ್ದನ ಗುರ್ಕಾರ್. 'ಪರಾವಲಂಬಿ', 'ಕೈಮಾಂಸ', 'ಕಾಂತೆಯರ ಕನಸು', 'ದಂಬನ ನಾರು', 'ಗಂಗಾವತಾರ', 'ಗುಡಿಯ ಸುತ್ತಮುತ್ತ' ಮುಂತಾದ 18 ಕಾದಂಬರಿಗಳು; ಎರಕು ಕಥಾಸಂಕಲನಗಳು; ಪ್ರಬಂಧ, ವಿಚಾರ ಸಾಹಿತ್ಯ ಮುಂತಾದ ಪ್ರಕಾರಗಳ ಆರು ಕೃತಿಗಳು ಜನಾರ್ದನ ಗುರ್ಕಾರರನ್ನು ಕನ್ನಡದ ಒಬ್ಬ ಮುಖ್ಯ ಲೇಖಕರನ್ನಾಗಿ ಸ್ಥಾಪಿಸಿವೆ. ಮೂಡಬಿದ್ರಿಯ ಬಳಿಯ ಅಶ್ವತ್ಥಪುರಕ್ಕೆ ಸಮೀಪವಿರುವ ಮುದ್ರಬೆಟ್ಟಿನಲ್ಲಿ ಜನಿಸಿದ (1932) ಗುರ್ಕಾರ್ ರೈಲ್ವೆ ಇಲಾಖೆಯ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. 2015ರಲ್ಲಿ ನಿಧನರಾದರು. ಗುರ್ಕಾರ ಬದುಕು-ಬರಹ ಪರಿಚಯಿಸುವ ಕೃತಿಯಿದು.
©2025 Book Brahma Private Limited.