ಕಾಂತಾವರ ಕನ್ನಡ ಸಂಘ ಪ್ರಕಟಿಸುತ್ತಿರುವ ನಾಡಿಗೆ ನಮಸ್ಕಾರ ಸರಣಿಯ 94ನೇ ಕೃತಿಯಿದು. ಕನ್ನಡದ ಪ್ರಮುಖ ಕಲಾವಿದ - ಸಾಹಿತಿಗಳಲ್ಲಿ ಒಬ್ಬರಾದ ದೇರಾಜೆ ಸೀತಾರಾಮಯ್ಯ ಅವರನ್ನು ಕುರಿತ ಪುಸ್ತಕವಿದು. ತಮ್ಮ ವಾಕ್ ವೈಖರಿಯಿಂದ ಯಕ್ಷಗಾನ - ತಾಳಮದ್ದಳೆ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ ದೇರಾಜೆ ಅವರ ಮಾತುಗಾರಿಕೆಯಲ್ಲಿನ ಧ್ವನಿ - ಅರ್ಥ - ರಸ ವಿಲಾಸ ಗಮನ ಸೆಳೆಯುತ್ತಿದ್ದವು. ಅವರ ಕೆಲವು ಪ್ರಕಟಿತ ಕೃತಿಗಳು: ಭೀಷ್ಮಾರ್ಜುನ ( ಯಕ್ಷಗಾನ ಪ್ರಸಂಗಕ್ಕೆ ಅರ್ಥ ) (1950), ಪ್ರಿಯದರ್ಶನಂ ( ಪದ್ಯಗಂಧಿ ಗದ್ಯ) (1953), ಧರ್ಮದಾಸಿ ( ನಾಟಕ ) (1955), ಯಕ್ಷಗಾನ ವಿವೇಚನೆ ( ಪ್ರಬಂಧ) (1957), ಸುಭದ್ರಾರ್ಜುನ ( ಪ್ರಸಂಗಕ್ಕೆ ಅರ್ಥ) (1959), ಶ್ರೀರಾಮ ಚರಿತಾಮೃತಂ (ಸಂಪೂರ್ಣ ಗದ್ಯ ರಾಮಾಯಣ ) (1960), ವಿಚಾರ ವಲ್ಲರಿ ( ವೈಚಾರಿಕ) (1972), ಧರ್ಮ ದರ್ಶನ ( ವೈಚಾರಿಕ ) (1973).
©2024 Book Brahma Private Limited.