ಅಡಿಗರು ಎಂಬ ಸಾಕ್ಷಿಪ್ರಜ್ಞೆ -ಸಂಪಾದನಾ ಕೃತಿ

Author : ರವಿಶಂಕರ್ ಎ.ಕೆ (ಅಂಕುರ)

Pages 264




Year of Publication: 2021
Published by: ಎಸ್. ಎಲ್. ಎನ್ ಪಬ್ಲಿಕೇಷನ್
Address: # 3437, 4ನೇ ಮುಖ್ಯರಸ್ತೆ, 9ನೇ ಅಡ್ಡರಸ್ತೆ, ಶಾಸ್ತ್ರೀ ನಗರ, ಬನಶಂಕರಿ, 2ನೇ ಹಂತ             ಬೆಂಗಳೂರು-560029 :
Phone: 9972129376

Synopsys

ಅಡಿಗರು ಎಂಬ ಸಾಕ್ಷಿ ಪ್ರಜ್ನೆ-ಈ ಕೃತಿಯ ಸಂಪಾದಕರು ರವಿಶಂಕರ ಎ.ಕೆ. (ಅಂಕುರ). ಕವಿ ಅಡಿಗರ ಕುರಿತು ವಿವಿಧ ಲೇಖಕರು ಬರೆದ ಬರಹಗಳ ಸಂಕಲನವಿದು. ಕವಿ ಗೋಪಾಲಕೃಷ್ಣ ಅಡಿಗರೆಂದರೆ ಕನ್ನಡ ಸಾಹಿತ್ಯದಲ್ಲಿ ಸಾಕ್ಷಿಪ್ರಜ್ಞೆಯ ಪ್ರತಿಭೆ. ಕನ್ನಡ ಸಾಹಿತ್ಯವನ್ನು ಹಲವು ದೃಷ್ಟಿಕೋನಗಳಿಂದ ಪ್ರಯೋಗಿಸಿದ ಮನೋವೈಜ್ಞಾನಿಕ ಸಾಹಿತಿ. ಹೊಸ ಹಾದಿಯ ದಿಟ್ಟತನ, ಸ್ನೇಹ-ಸಂಚಲನದ ಭಾವುಕತೆ, ಅನ್ವೇಷಣಾ ದೃಷ್ಟಿಕೋನ ಇವರ ಸಹಜ ಕಲೆ. ಸಮಾಜದಲ್ಲಿ ತಾವು ಕಾಣುವ ಡೊಂಕುಗಳನ್ನು ತಮ್ಮ ನೇರನುಡಿಯಲ್ಲಿ ನುಡಿದವರು-ಬರೆದವರು. ಇವರ ಬರಹಗಳ ಗ್ರಹಿಕೆಗೆ ಏಕತಾನತೆ ಬೇಕು. ಭಾರತೀಯ ಸಂಸ್ಕೃತಿ-ಪಾಶ್ಚಾತ್ಯ ಅಭಿರುಚಿಗಳ ವಿಶಾಲ ಗ್ರಹಿಕೆಯಿಂದ ಸೃಷ್ಟಿಗೊಂಡ ಅಡಿಗರ ಸಾಹಿತ್ಯ ಶಕ್ತಿಯನ್ನು ಸ್ಪರ್ಶಿಸಲು ಸಹೃದಯನಿಗೂ ಅಂತಹದೇ ಶಕ್ತಿ ಬೇಕು ಎನಿಸುತ್ತದೆ. ಇಲ್ಲದಿರೆ ಕಾಣುವ ಬೆಳಕೆಲ್ಲವೂ ಒಂದೊಂದು ದೃಷ್ಟಿಕೋನವಷ್ಟೆ. ವಾಸ್ತವಪ್ರಜ್ಞೆಗೆ ಅಡಿಗರು ಕಾವ್ಯದ ಮೂಲಕ ಪ್ರತಿಮಾ ಕನ್ನಡಿಯನ್ನು ದರ್ಶಿಸಿದರೆ, ಗದ್ಯದಲ್ಲಿ ಸರಳವಾಗಿ ನಿರೂಪಿಸುತ್ತಾರೆ. ಸಮಾಜದ ಸಾಕ್ಷಿಪ್ರಜ್ಞೆಯಾಗಿ ಇವರ ಸಾಹಿತ್ಯವು ಶತಮಾನಗಳ ಕೊಂಡಿ ಬೆಳೆಸುತ್ತದೆ. ಆಧುನಿಕ ತಂತ್ರಜ್ಞಾನದ ಭರಾಟೆಗೆ ಸಿಲುಕಿರುವ ಇಂದಿನ ಅಧ್ಯಯನಕಾರರು ನಿರ್ದಿಷ್ಟ ಓದನ್ನು ನಿಯಂತ್ರಿಸಿಕೊಂಡಿದ್ದಾರೆ. ಅಭಿರುಚಿ ಓದುವಿನ ಸವಾರಿಯಲ್ಲಿದ್ದಾರೆ. ಅಡಿಗರನ್ನು ಅರ್ಥವಾಗದ ಸೂತ್ರಪಟದಲ್ಲಿಯೇ ಓದುತ್ತಾ ಬಂದ ನನ್ನಂತವರಿಗೆ ಅವರ ‘ಸಾಕ್ಷಿ’ ಪತ್ರಿಕೆಯ ಸಂಪಾದನಾ ಕಾರ್ಯವು ಅತ್ಯಂತ ಕುತೂಹಲ ಮೂಡಿಸಿತು. ಹೊಸ ಹೊಸ ಬರಹಗಾರರನ್ನು ಸೃಷ್ಟಿಸಿ, ಕನ್ನಡದ ಸಾಕ್ಷಿಪ್ರಜ್ಞೆಯ ಕಾರ್ಯವನ್ನು ಅವರ ಪ್ರತಿಭೆಗಳಿಂದ ಹೊರತೆಗೆದು, ಇಂದಿನ ಗಂಭೀರ ಅಧ್ಯಯನಕಾರರ ಮೊದಲ ವೇದಿಕೆಯಾಗಿಯೂ ಕೆಲಸ ಮಾಡಿತು. ಈ ‘ಸಾಕ್ಷಿ’ ಪತ್ರಿಕೆಯನ್ನು ಓದುವ ನೆಪದಲ್ಲಿ ಐವತ್ತಕ್ಕೂ ಹೆಚ್ಚು ಅಧ್ಯಯನಕಾರರು ಸ್ವಯಂ ಆಸಕ್ತಿಯಿಂದ ಒಂದುಗೂಡಿದೆವು. ನಲವತ್ತೆಂಟು ಸಂಚಿಕೆಗಳನ್ನು ತಿರುವುತ್ತಾ ಎರಡು ವರ್ಷ ಕಳೆದೆವು. ಹತ್ತಾರು ಲೇಖನಗಳು ಸಿದ್ಧವಾದವು. ಜೊತೆಗೆ ಅಡಿಗರ ಸಾಹಿತ್ಯವನ್ನು ಅಧ್ಯಯನ ಮಾಡಿದ ಕೆಲವು ಲೇಖಕರು ‘ಜೀವನ ಪ್ರೀತಿ ಮಾಲಿಕೆ’ಯ ಸಾಕ್ಷಿಪ್ರಜ್ಞೆಯ ಕಾರ್ಯಕ್ಕೆ ಜೊತೆಯಾದರು. ಒಟ್ಟಾಗಿ ಗೋಪಾಲಕೃಷ್ಣ ಅಡಿಗರ ಸಾಹಿತ್ಯ, ಅವರ ಸಾಹಿತ್ಯ ಕಾರ್ಯದ ಅಧ್ಯಯನದ ಫಲಿತವೇ ಈ ಸಾಕ್ಷಿಪ್ರಜ್ಞೆಯ ಕಾರ್ಯ.

ಈ ಸಂಪಾದನಾ ಕೃತಿಯ ವಿವಿಧ ಲೇಖಕರು , ಗೋಪಾಲಕೃಷ್ಣ ಅಡಿಗರ ಸಂಪಾದಕೀಯ – ಡಾ. ರವಿಶಂಕರ್ ಎ.ಕೆ, ಸಾಕ್ಷಿ : ಸಮಕಾಲೀನ ಸಾಹಿತ್ಯದ ಕೈಗನ್ನಡಿ - ಸುಧಾಕರ ದೇವಾಡಿಗ ಬಿ, ಸಾಕ್ಷಿ ಪ್ರಜ್ಞೆಯ ಒಳನೋಟ - ಮೇಘನಾ ಕೆ , ಸಾಕ್ಷಿ ಇಪ್ಪತ್ತೆರಡರ ಮರು ಓದು - ಉಷಾ ಜಿ. ಎನ್.. ಈಚಿನ ಕನ್ನಡ ಕವಿತೆಗಳ ಕುರಿತ ಸಾಕ್ಷಿಯ ಮರು ಓದು - ಭಾರತಿ ಮೂಲಿಮನಿ, ಸಾಕ್ಷಿ ಇಪ್ಪತ್ಮೂರರ ಒಳಹೊರಗೆ - ಯೋಗೀಶ ಎಚ್ ವಡ್ಡರಕುಪ್ಪೆ, ‘ಹೊಕ್ಕುಳಲ್ಲಿ ಹೂವಿಲ್ಲ’ ಕುರಿತ ಎರಡು ಪ್ರತಿಕ್ರಿಯೆಗಳ ವಿಮರ್ಶೆ - ದೇವಿಕಾ ರಮೇಶ ಧಟ್ಟಿ  ಸಾಕ್ಷಿ - ಸಾಹಿತ್ಯ ಸಂಸ್ಕೃತಿಗಳ ವಿಚಾರ ವಿಮರ್ಶೆಯ ವೇದಿಕೆ - ಕೆ. ಸುಮಾ ರಾವ್ , ನವ್ಯದ ಪ್ರತಿಬಿಂಬವಾಗಿ ಸಾಕ್ಷಿ - ಡಾ. ವೀಣಾ ಕಲ್ಮಠ, ಆದರ್ಶ ರಾಜ್ಯದ ಕನಸುಗಾರ – ಎಂ ಗೋಪಾಲಕೃಷ್ಣ ಅಡಿಗ - ಮಮತಾ ಸಿ ಹೆಚ್,  ಎಂ.ಗೋಪಾಲಕೃಷ್ಣ ಅಡಿಗರ ಕಥನ ಸಾಹಿತ್ಯದ ಮರುಓದು - ಸೈಯದ್ ಮುಯಿನ್, ಅಡಿಗರ ಎರಡು ಕವಿತೆಗಳು : ಕಾಲಗಳ ಸಂಘರ್ಷ ಮತ್ತು ಸಮನ್ವಯತೆ - ವಸಂತಕುಮಾರ್, ಅಡಿಗರ ಕವಿತೆಗಳ ಮಹತ್ವ - ಡಾ. ಪ್ರೇಮಪಲ್ಲವಿ ಸಿ. ಬಿ,  ಸ್ವಾತಂತ್ರ್ಯದ ಧ್ಯಾನದಲ್ಲಿ ಅಡಿಗರ ಕವಿತೆಗಳು - ಕುಸುಮ. ಬಿ.ಎಂ. ಅಡಿಗರ ಎರಡು ಕವಿತೆಗಳು : ನೈಜ ಬದುಕಿನ ಹುಡುಕಾಟ - ನಸ್ರೀನ್ ಬಾನು, ‘ನನ್ನ ನಿನ್ನ ಲೋಕ’ದಲ್ಲಿ ಪ್ರೀತಿಯ ಮೆರವಣಿಗೆ - ಡಾ. ಹೊನ್ನೇಗೌಡ ಹೊಸಮನೆ-ಹೀಗೆ ಬರಹಗಳನ್ನು ಒಳಗೊಂಡಿದೆ. ಗೋಪಾಲಕೃಷ್ಣ ಅಡಿಗರ ಪ್ರಯೋಗಶೀಲ ಪತ್ರಿಕೆ ಸಾಕ್ಷಿ ಕುರಿತ ಸಮಕಾಲೀನ ಅಧ್ಯಯನವಿದು.

         

About the Author

ರವಿಶಂಕರ್ ಎ.ಕೆ (ಅಂಕುರ)

ರವಿಶಂಕರ ಎ.ಕೆ. ಅವರು ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಅಳಿಲುಘಟ್ಟ ಗ್ರಾಮದವರು. ಅರವಿಂದ ಆಶ್ರಮದಿಂದ ಪ್ರಭಾವಿತರು. ಕನ್ನಡ ಸಾಹಿತ್ಯದಲ್ಲಿ ಶಿಕ್ಷಣ ಪದವಿ, ಸ್ನಾತಕೋತ್ತರ ಪದವಿ ಹಾಗೂ ‘ಬೇಂದ್ರೆ ಸಾಹಿತ್ಯ : ವಿಮರ್ಶೆಯ ಸ್ವರೂಪ ಮತ್ತು ತಾತ್ವಿಕತೆ’ ವಿಷಯದ ಮೇಲೆ ಪಿಎಚ್.ಡಿ ಪದವಿ ಪಡೆದಿದ್ದಾರೆ. ಜೈನ್ ವಿಶ್ವವಿದ್ಯಾಲಯ, ಆಳ್ವಾಸ್ ಶಿಕ್ಷಣ ಸಂಸ್ಥೆ, ಕೃಪಾನಿಧಿ ಶಿಕ್ಷಣ ಸಂಸ್ಥೆಗಳಲ್ಲಿ ಉಪನ್ಯಾಸಕರಾಗಿ ಸದ್ಯ ಬೆಂಗಳೂರಿನ ಕ್ರಿಸ್ತು ಜಯಂತಿ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ. ಅಂಕುರ-ಎಂಬುದು ಇವರ ಕಾವ್ಯನಾಮ.  ಕೃತಿಗಳು: ಖಾನ್ ಅಬ್ದುಲ್ ಗಫಾರ್ ಖಾನ್(ಜೀವನ ಚರಿತ್ರೆ 2013), ಎತ್ತಿಕೊಂಡವರ ಕೂಸು (ಕವನ ಸಂಕಲನ -2017), ...

READ MORE

Excerpt / E-Books

ಒಂದು ಬರಹವು ನಿರ್ದಿಷ್ಠ ಓದನ್ನು, ಪುನರ್ ಅಧ್ಯಯನವನ್ನು ಹಂಬಲಿಸುತ್ತದೆ. ಅದರ ಪ್ರತಿಫಲವಾಗಿ ಓದುಗನಲ್ಲಿ ನೆಲೆನಿಲ್ಲುತ್ತದೆ. ಎಲ್ಲವೂ ಅಳಿಸುವ ಬರಹಗಳೇ ಆದರೂ ಹೊಸದೊಂದು ಸೃಷ್ಠಿಗೆ ಕಾರಣವಾಗುವ ಪ್ರೇರಕಗಳು ಎಂಬುದನ್ನು ಮರೆಯುವಂತಿಲ್ಲ. ಈ ದೃಷ್ಠಿಯಿಂದ ‘ಜೀವನಪ್ರೀತಿ’ ಎಂಬ ಶೀರ್ಷಿಕೆಯ ಅಡಿಯಲ್ಲಿ ಓದು, ಬರಹ ಹಾಗೂ ನುಡಿಚಿತ್ರಗಳನ್ನು ಸಮಾಜದಲ್ಲಿ ಬಿತ್ತಲು ಹೊಸದೊಂದು ಸಾಹಿತ್ಯಸೇವೆ ಸೃಷ್ಠಿಸಲಾಗಿದೆ. ‘ಅಡಿಗರು ಎಂಬ ಸಾಕ್ಷಿಪ್ರಜ್ಞೆ’ ಇದೊಂದು ಸಹೃದಯ ವಿಮರ್ಶಾ ಕೃತಿ. ಗೋಪಾಲಕೃಷ್ಣ ಅಡಿಗರ ಸಾಹಿತ್ಯ ಹಾಗೂ ಅವರ ಸಂಪಾದಕತ್ವದಲ್ಲಿ ಬಂದ ‘ಸಾಕ್ಷಿ’ ಪತ್ರಿಕೆಯ ಕುರಿತು ಇಲ್ಲಿ ಅಧ್ಯಯನ ನಡೆಸಲಾಗಿದೆ. ಸಹೃದಯ ಲೇಖಕರು ತಮಗೆ ಹಿತವೆನಿಸಿದ ಸಾಹಿತ್ಯವನ್ನು ತಮ್ಮದೇ ಅಧ್ಯಯನ ಶೈಲಿಗೆ ಅಳವಡಿಸಿದ್ದಾರೆ. ಸಾಹಿತ್ಯದ ಹೊಸ ಓದುವಿಗೆ ಈ ಕೃತಿಯು ಅನುಕೂಲವಾಗುವುದಾದರೆ ಎಲ್ಲರ ಶ್ರಮವೂ ಸಾರ್ಥಕವಾಗುತ್ತದೆ. ಜೀವನಪ್ರೀತಿ ಮಾಲಿಕೆಯ ಎರಡನೆಯ ಕೃತಿಯಾಗಿ ‘ಅಂಬೇಡ್ಕರ್ ಎಂಬ ಅಂತಃಕರಣ’ ಕೃತಿಯನ್ನು ಹೊರತಂದಿದ್ದು, ಈ ಕೃತಿಯ ಅಧ್ಯಯನದಲ್ಲಿ ಹಾಗೂ ಮುಂದಿನ ಎಲ್ಲಾ ಸಾಹಿತ್ಯ ಕಾರ್ಯಗಳಿಗೂ ಸಹೃದಯರ ಓದುವಿನ ಪ್ರೀತಿ ಸದಾ ಇರಲೆಂದು ಬಯಸುತ್ತೇನೆ.

Reviews

 

 

 

Related Books