ಕವಿ, ವಿಮರ್ಶಕರಾದ ಎಚ್.ಎಸ್. ವೆಂಕಟೇಶಮೂರ್ತಿ ಅವರ 'ಆಪ್ತಗೀತೆ'ಯು ಭಗವದ್ಗೀತೆಯ ಸರಳ ಕಾವ್ಯಾನುವಾದ. ಭಗವದ್ಗೀತೆಯನ್ನು ಓದಿಕೊಳ್ಳುವ, ಅರ್ಥೈಸಿಕೊಳ್ಳುವ ,ಗ್ರಹಿಸುವ ಪರಿಯನ್ನು ತಮ್ಮ ಕಾವ್ಯಾನುವಾದದ ಮೂಲಕ ’ಆಪ್ತಗೀತೆ’ಯಲ್ಲಿ ಓದುಗರನ್ನು ಕಾವ್ಯ ಲೋಕಕ್ಕೆ ಪರಿಚಯಿಸಿದ್ದಾರೆ.ಸರಳ ಹಾಗೂ ಕಥನ ಗುಣದಿಂದ ಓದುಗರಿಗೆ ಈ ಕೃತಿ ಹತ್ತಿರವಾಗುತ್ತದೆ,ಭಗವದ್ಗೀತೆಯ ಪ್ರತಿ ಶ್ಲೋಕಕ್ಕೆ ನಾಲ್ಕು ಸಾಲುಗಳುಳ್ಳ ಚೌಪದಿ ರಚನೆಯನ್ನು ಕವಿ ಮಾಡಿದ್ದಾರೆ. ಭಗವದ್ಗೀತೆಯಲ್ಲಿನ 'ಸಂಜಯ ಉವಾಚ', 'ಅರ್ಜುನ ಉವಾಚ’ದಂತಹ ಸೂಚನೆ ಕೈಬಿಟ್ಟು ಖಂಡಕಾವ್ಯದ ರೀತಿಯಲ್ಲಿ ಕಾವ್ಯಾನುಸಂಧಾನದ ಅನುವಾದ ರಚನೆಯನ್ನು ಮಾಡಿದ್ಧಾರೆ.
ಓದುಗರನ್ನು ಸರಾಗವಾಗಿ ಓದಿಸಿಕೊಳ್ಳುವ ಕಾವ್ಯಗುಣವನ್ನು ಈ ಕೃತಿ ಓದುಗರಲ್ಲಿ ಬೆಳೆಸುತ್ತದೆ. ಸಮಾಜದ ಅಗತ್ಯವಾದ, ಜೀವನದ ಅನೇಕ ತತ್ವ, ಬೋಧನೆ, ಮರ್ಮಗಳನ್ನು ಭಗವದ್ಗೀತೆ ಬೋಧಿಸುತ್ತದೆ, ಅಂತೆಯೇ ಕವಿ ಎಚ್.ಎಸ್. ವೆಂಕಟೇಶ್ ಮೂರ್ತಿಯವರ ಈ ಕಾವ್ಯಾನುವಾದ ರಚನೆ ಕಾವ್ಯಾತ್ಮಕವಾಗಿ ಗೀತೆ ಹತ್ತಿರವಾಗುವಂತೆ ಮನಕ್ಕಿಳಿಯುತ್ತದೆ. ಜ್ಞಾನ, ಕರ್ಮ, ಭಕ್ತಿ ಯೋಗಗಳನ್ನು ಶ್ರೀ ಕೃಷ್ಣ ಹಂತಹಂತವಾಗಿ ಬೋಧಿಸಿರುವ ಮೌಲ್ಯಯುತ ತತ್ವವನ್ನು ಸರಾಗವಾಗಿಯೇ ’ಆಪ್ತಗೀತೆ’ ತಿಳಿಸುತ್ತದೆ.
ಕಾವ್ಯಾನುವಾದ 'ಆಪ್ತಗೀತೆ'ಯ ಕುರಿತು ಕೃತಿಯ ಲೇಖಕರಾದ ಎಚ್. ಎಸ್. ವೆಂಕಟೇಶಮರ್ತಿ ಅವರ ಮಾತುಗಳು.
©2024 Book Brahma Private Limited.