ಅಹಂ ಬ್ರಹ್ಮಾಸ್ಮಿ, ಶಿವೋಹಂ-ಎಂದು ಉದ್ಯೋಷಿಸಿ, ಅದೈತ ಸಿದ್ಧಾಂತದ ವಿಜಯದುಂದುಭಿಯನ್ನು ಅಪ್ರತಿಹತವಾಗಿ ಮೊಳಗಿಸಿ, ಭರತ ಖಂಡದ ಧಾರ್ಮಿಕರಂಗದಲ್ಲೊಂದು ಮಹತ್ತರ ಕ್ರಾಂತಿಯನ್ನೆಚ್ಚಿಸಿದ ಪ್ರಚಂಡ ಚೇತನ ಶ್ರೀ ಶಂಕರಾಚಾರ್ಯರು, ವೇದಾಂತಿ, ವಾದಿ, ತಾರ್ಕಿಕ ಭಕ್ತ, ಅನುಭಾವಿ-ಎಲ್ಲವೂ ಆಗಿರುವ ಬಹುಮುಖ ವ್ಯಕ್ತಿತ್ವ ಆಚಾರ್ಯರದು. ಇಷ್ಟಲ್ಲದೆ ಅವರು ಶ್ರೇಷ್ಠ ಸ್ತರದ ಕವಿಯೂ ಹೌದು. ಆಚಾರ್ಯರ ಜೀವನಕಥೆಯನ್ನು ಈ 'ಆದಿಗುರು ಶಂಕರಾಚಾರ್ಯ' ಗ್ರಂಥ ಸರಳವಾಗಿ, ಸಂಗ್ರಹವಾಗಿ ನಿರೂಪಿಸುತ್ತದೆ. ಮಕ್ಕಳನ್ನು ದೃಷ್ಟಿಯಲ್ಲಿರಿಸಿ ಕೊಂಡು ಈ ಕೃತಿ ಗಹನ ವಿಷಯಗಳ ಗೊಡವೆಗೆ ಹೋಗದೆ, ಶಂಕರರ ಸಾಧನೆ, ಸಿದ್ಧಿಗಳ ಸ್ಥಲ ಚಿತ್ರವನ್ನು ಸುಲಭಗ್ರಾಹ್ಯ ರೀತಿಯಲ್ಲಿ ಕೊಡುತ್ತದೆ. ಪವಾಡಭೂಷ್ಠವಾಗಿ ಶಂಕರ ಚರಿತವನ್ನು ನಿರೂಪಿಸುವ ಈ ಪುಸ್ತಕದಲ್ಲಿ ವೈಚಾರಿಕ ವಿವರಣೆಗೆ ಅಷ್ಟಾಗಿ ಅವಕಾಶವಿಲ್ಲ, ಇಲ್ಲಿ ಉಕ್ತವಾಗಿರುವ ಘಟನೆ, ಪ್ರಸಂಗಗಳಲ್ಲಿ ಆಚಾರ್ಯರ ಹಿರಿಮೆಗೆ ಪ್ರತಿಮೆಗಳಾಗಿವೆ. ಈ ಪುಸ್ತಕವನ್ನು ಎಸ್.ಟಿ. ರಾಮಚಂದ್ರ ಅವರು ಹಿಂದಿಯಿಂದ ಸಾಕಷ್ಟು ಸಮರ್ಪಕವಾಗಿ ಅನುವಾದಿಸಿದ್ದಾರೆ. ಅವರ ಅನೇಕ ಕೃತಿಗಳ ಜೊತೆಗೆ ಹಲವಾರು ಲೇಖನಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ದೇಶದ ಅನೇಕ ಭಾಗಗಳಲ್ಲಿ ಕಾರ್ಯನಿರ್ವಹಿಸಿ, ಈಗ ಕೆನರಾ ಬ್ಯಾಂಕ್ ಪ್ರಧಾನ ಕಾರ್ಯಾಲಯ ಬೆಂಗಳೂರಿನಲ್ಲಿ ಉಪ ಮಹಾಪ್ರಬಂಧಕರಾಗಿ ಸೇವೆ ಸಲ್ಲಿಸುತ್ತಿರುವ ಇವರು ಹಿಂದಿ ಎಂ.ಎ., ಹಿಂದಿ ರತ್ನ ಮತ್ತು ಡಾಕ್ಟರೇಟ್ ಪದವಿಗಳನ್ನು ಮಾತ್ರವಲ್ಲದೆ ಭಾಷಾಂತರ ಡಿಪ್ಲೋಮವನ್ನು ನಡುವೆ ಆದಾನ-ಪ್ರಧಾನಕ್ಕೆ ಪಡೆದುಕೊಂಡಿದ್ದಾರೆ. ಕನ್ನಡ-ಹಿಂದಿಗಳ ಸಮರ್ಥರಾಗಿರುವ ರಾಮಚಂದ್ರ ಅವರಿಂದ ಕನ್ನಡ ಸಾಹಿತ್ಯಕ್ಕೆ ಇನ್ನು ಒಳ್ಳೆಯ ಕೊಡುಗೆಗಳು ಸಲ್ಲುವುವೆಂದು ನಿರೀಕ್ಷಿಸಬಹುದು. (ಕರ್ನಾಟಕ ಸರ್ಕಾರ ಶಿಕ್ಷಣ ಇಲಾಖೆಯಿಂದ ಪ್ರಥಮ ಪುರಸ್ಕಾರ ಪಡೆದ ಕೃತಿ)
©2024 Book Brahma Private Limited.