About the Author

ದಕ್ಷಿಣ ಕನ್ನಡ ಜಿಲ್ಲೆಯ ಮಾನವ ಸಂಪನ್ಮೂಲ ಅಭಿವೃದ್ಧಿ ಕಾರ್ಯಕ್ರಮಗಳ ಸಂಪನ್ಮೂಲ ವ್ಯಕ್ತಿಗಳಲ್ಲಿ ಬಹುಮುಖ್ಯ ಮತ್ತು ಜನಪ್ರಿಯ ಹೆಸರು ಬೈಕಾಡಿಯವರದ್ದು. ರಾಷ್ಟ್ರಮಟ್ಟದ ಮಾನವ ಸಂಪನ್ಮೂಲ ಅಭಿವೃದ್ಧಿ ಕಾರ್ಯಕ್ರಮ ಏರ್ಪಡಿಸುವ ಪ್ರತಿಷ್ಠಿತ ಸಂಸ್ಥೆಗಳಾದ Aim Insights ಮತ್ತು Abhiyanam ಇವರ ನೇತೃತ್ವದಲ್ಲಿ ಸಂಘಟಿಸಿದ ಶಿಬಿರ ಕಮ್ಮಟಗಳು ನೂರಕ್ಕೂ ಹೆಚ್ಚು. ಕಾನೂನು, ಅರ್ಥಶಾಸ್ತ್ರ, ಶಿಕ್ಷಣ ಶಾಸ್ತ್ರಗಳ ಪದವೀಧರರಾಗಿರುವ ಅವರು ಹಿಂದಿ ಇಂಗ್ಲೀಷ್ ಭಾಷೆಗಳಲ್ಲೂ ಸ್ನಾತಕೋತ್ತರ ಪದವಿಗಳ ಪಡೆದವರು. ಮಂಗಳೂರಿನ ಕೆನರಾ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿರುವ ಅವರು ಮಕ್ಕಳಲ್ಲಿ ಆತ್ಮಸ್ಥೆರ್ಯ, ಕೌಶಲ್ಯ, ಸಂವಹನ ಮತ್ತು ಪ್ರತಿಭೆ ಹೆಚ್ಚಿಸುವ ಶಿಬಿರಗಳಲ್ಲಿ ಸದಾ ತೊಡಗಿಸಿಕೊಂಡಿರುತ್ತಾರೆ. ರಂಗಭೂಮಿ ಅವರ ಆಸಕ್ತಿಯ ಇನ್ನೊಂದು ಕ್ಷೇತ್ರ. ಡಾ. ಅಮೃತ ಸೋಮೇಶ್ವರ, ಪ್ರೇಮಾ ಕಾರಂತ, ಪ್ರೊ. ರಾಮದಾಸ್ ಮೊದಲಾದವರ ಮೂವತ್ತಕ್ಕೂ ಹೆಚ್ಚಿನ ನಾಟಕಗಳನ್ನು ನಿರ್ದೇಶಿಸಿದ ಹೆಗ್ಗಳಿಕೆ ಅವರದು. ಕರ್ನಾಟಕ ನಾಟಕ ಅಕಾಡೆಮಿಯು ಸುವರ್ಣ ಗೌರವ ಪ್ರಶಸ್ತಿ ನೀಡಿ ಗೌರವಿಸಿದೆ. ಅನೇಕ ಸಂಸ್ಮರಣಾ ಗ್ರಂಥಗಳ ಸಂಪಾದನೆಯ ಅನುಭವ ಇರುವ ಬೈಕಾಡಿಯವರು, ಒಳ್ಳೆಯ ವಾಗ್ಮಿ ಹಾಗೂ ಕಾರ್ಯಕ್ರಮ ನಿರೂಪಕ, ಪತ್ರಕರ್ತ ಕೂಡ.

ಬೈಕಾಡಿ ಜನಾರ್ದನ ಆಚಾರ್