ರಾಧಾಕೃಷ್ಣ ಕೆ. ಉಳಿಯತ್ತಡ್ಕ (ಜನನ 1958) ಕಾಸರಗೋಡಿನ 'ತುಳುನಾಡು ಟೈಮ್' ದೈನಿಕದ ಸುದ್ದಿ ಸಂಪಾದಕರು. ಅವರು ಸಾಹಿತ್ಯ ರಚನೆ, ಸಂಘಟನಾ ಕಾರ್ಯದಲ್ಲಿ ಸಕ್ರಿಯರಾಗಿರು ವವರು. ಕಾಸರಗೋಡು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ, ಕನ್ನಡ ಲೇಖಕರ ಸಂಘದ ಕಾರ್ಯದರ್ಶಿಯಾಗಿ, ಹಲವು ಸಾಂಸ್ಕೃತಿಕ ಸಂಘಟನೆಗಳ ನಿರ್ದೇಶಕರಾಗಿ, ಸದಸ್ಯರಾಗಿರುವ ರಾಧಾಕೃಷ್ಣ ಉಳಿಯತ್ತಡ್ಕರ ಪ್ರಕಟಿತ ಕೃತಿಗಳು: ಸರಳ ಗೀತೆಗಳು, ಈ ನನ್ನ ಶಬ್ದಗಳು, ನೋವ ಜಿನುಗುವ ಜೀವ, ಬೆಂಕಿ ನುಂಗುವ ಹುಡುಗ, ಹದಿಯರೆಯದ ಹನಿಗಳು, ಮತ್ತು ಅರ್ಧ ಸತ್ಯದ ಬೆಳಕು (ಕವನ ಸಂಕಲನಗಳು); ಕುತ್ಯಾಳ ಸಂಪದ, ನೆಲದ ಧ್ಯಾನ, ಮಧೂರು, ಕಯ್ಯಾರ, ಕಯ್ಯಾರ ಗದ್ಯ ಸೌರಭ, ಗುರು-ಕವಿ, ಲಕ್ಷ್ಮಿ ಕುಂಜತ್ತೂರು, ಡಾ. ವಸಂತಕುಮಾರ್ ಪೆರ್ಲ ಮತ್ತು 'ಶ್ರೀ ಕ್ಷೇತ್ರ ಮಧೂರು' ಇತ್ಯಾದಿ ಕೃತಿಗಳನ್ನು ಪ್ರಕಟಿಸಿದ್ದಾರೆ. ಉಳಿಯತ್ತಡ್ಕ ಅವರಿಗೆ ಸಾಧನೆಗಾಗಿ ಇಪ್ಪತ್ತೈದಕ್ಕಿಂತಲೂ ಹೆಚ್ಚಿನ ಪ್ರಶಸ್ತಿ ಹಾಗೂ ಸನ್ಮಾನ ಸಂದಿವೆ.