ಪಾವಂಜೆಯಲ್ಲಿ(೧೯೫೬) ಜನಿಸಿದ ಯಾಜಿ, ಡಾ. ಎಚ್.ದಿವಾಕರ ಭಟ್ ಅವರು ಬಿ.ಎಸ್.ಸಿ, ಸಂಸ್ಕೃತ ಎಂ.ಎ, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ, ಮತ್ತು ಪಿಎಚ್.ಡಿ ಪದವಿಯನ್ನು ಪಡೆದಿದ್ದಾರೆ. ನಿಟ್ಟೆ NMAMIT ತಾಂತ್ರಿಕ ಮಹಾವಿದ್ಯಾಲಯದಲ್ಲಿ ಪ್ರಧಾನ ಗ್ರಂಥಪಾಲಕರಾಗಿ ಸೇವೆ ಸಲ್ಲಿಸುತ್ತಿರುವ ಅವರು ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ತಂತ್ರಿಗಳಾಗಿದ್ದಾರೆ. 'Do it yourself, 'ಶಾಕ್ತಪಂಥ', 'ಚಿನ್ಮಯ ಮಿಷನ್ ಮಂಗಳೂರು', 'In search of Information Power', 'ನಮ್ಮ ವೇದ ಗುರುಗಳು- ಕೊಕ್ಕಡ ಅನಂತಪದ್ಮನಾಭ ಶಾಸ್ತ್ರಿಗಳು', 'Building Knowledge Centers' ಎಂಬ ಗ್ರಂಥಗಳನ್ನು ಸಂಪಾದಿಸಿ, ಪ್ರಕಟಿಸಿದ್ದಾರೆ. “ಅಸತೋ ಮಾ ಸದ್ಗಮಯ', 'ತಮಸೋಮಾ ಜ್ಯೋತಿರ್ಗಮಯ', 'ಮೃತ್ಯೋರ್ಮಾ ಅಮೃತಂ ಗಮಯ', `ನಿಟ್ಟೆ ಮಹಾಲಿಂಗ ಅಡ್ಯಂತಾಯ', 'ಪಾವಂಜೆ ಲಕ್ಷ್ಮೀನಾರಣಪ್ಪಯ್ಯ' ಇವರ ಇತರ ಕೃತಿಗಳು.