ತುಳು-ಕನ್ನಡ ಉಭಯಭಾಷಾ ಕವಿ-ಸಾಹಿತಿ ಎನ್.ಪಿ. ಶೆಟ್ಟಿ ಮುಲ್ಕಿ ಅವರು ದಕ್ಷಿಣ ಕನ್ನಡದ ಮಂಗಳೂರಿನ ಮುಲ್ಕಿಯಲ್ಲಿ ಜನಿಸಿದರು. ತಂದೆ ಕುಬೆವೂರು ಪುಟ್ಟಣ್ಣ ಶೆಟ್ಟಿ. ಯಕ್ಷಗಾನ, ಯೋಗ ಕ್ಷೇತ್ರದಲ್ಲಿಯೂ ಅಪಾರ ಜನಮನ್ನಣೆಯನ್ನು ಪಡೆದಿದ್ದ ಅವರು, ಕನ್ನಡ ಸಾಹಿತ್ಯದಲ್ಲಿ ಎಂ.ಎ. ಪದವಿ ಪಡೆದು ಮುಂಬಯಿಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿದ್ದರು.
ನಂತರ ವಿಜಯಾ ಬ್ಯಾಂಕಿನ ಅಧಿಕಾರಿಯಾಗಿ ಸ್ವಯಂ ನಿವೃತ್ತಿ ಪಡೆದರು. ಅವರ ‘ಬತ್ತೆ ಕೆತ್ತರೆ ಉತ್ತರೆ, ತಪ್ಪುಗು ತರೆದಂಡ’ ಕೃತಿಗಳಿಗೆ ತುಳು ಸಾಹಿತ್ಯ ಅಕಾಡೆಮಿಯ ಕಾವ್ಯ ಪ್ರಶಸ್ತಿ ದೊರೆತಿವೆ. ತುಳು – ಕನ್ನಡ ಉಭಯಭಾಷಾ ಕವಿ, ಸಾಹಿತಿ ಎನ್.ಪಿ. ಶೆಟ್ಟಿ ಮುಲ್ಕಿ ಇವರು ಮುಲ್ಕಿಯವರೇ ಆದ ದೇಶಭಕ್ತ ಸಮಾಜಸುಧಾರಕ ಮುಲ್ಕಿ ರಾಮಕೃಷ್ಣ ಪೂಂಜರ ಕುರಿತಾದ ಈ ಹೊತ್ತಗೆಯನ್ನು ರಚಿಸಿಕೊಟ್ಟಿದ್ದಾರೆ. ಎನ್.ಪಿ.ಶೆಟ್ಟರು ಖ್ಯಾತ ವಿದ್ವಾಂಸ, ಯಕ್ಷಗಾನ ಕವಿ, ಅರ್ಥಧಾರಿ ದಿ.ಕುಬೆವೂರು ಪುಟ್ಟಣ್ಣ ಶೆಟ್ಟರ ಸುಪುತ್ರ; ಕುಬೆವೂರು ಪುಟ್ಟಣ್ಣ ಶೆಟ್ಟಿ ಯಕ್ಷಗಾನ ಪ್ರಶಸ್ತಿಯ ಸಂಚಾಲಕರಾಗಿದ್ದಾರೆ. ಎನ್.(ನಾರಾಯಣ)ಪಿ. ಶೆಟ್ಟಿಯವರು (೧೯೪೭) ಕನ್ನಡ ಸಾಹಿತ್ಯದಲ್ಲಿ ಎಂ.ಎ. ಪದವಿ ಪಡೆದು ಮುಂಬಯಿಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಕೆಲಸ ಮಾಡಿದವರು. ನಂತರ ವಿಜಯಾ ಬ್ಯಾಂಕಿನ ಅಧಿಕಾರಿಯಾಗಿ; ಪ್ರಶಿಕ್ಷಣ ಕೇಂದ್ರದಲ್ಲಿ ತರಬೇತುದಾರರಾಗಿ ಕರ್ತವ್ಯ ನಿರ್ವಹಿಸಿ ಸ್ವಯಂ ನಿವೃತ್ತಿ ಪಡೆದರು. ಹಲವಾರು ಸಾಹಿತ್ಯ ಸಂಘಟನೆಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿರುವ ಎನ್.ಪಿ. ಶೆಟ್ಟರು ಕನ್ನಡ ಮತ್ತು ತುಳು ಎರಡೂ ಭಾಷೆಗಳಲ್ಲಿ ಉನ್ನತ ಮಟ್ಟದ ಕಾವ್ಯ ರಚಿಸಿದ್ದಾರೆ. ಅವರ ತುಳು ಕೃತಿಗಳು: ಬತ್ತೆ ಕೆತ್ತರೆ ಉತ್ತರೆ, ತಪ್ಪುಗು ತರೆದಂಡ (ತುಳು ಸಾಹಿತ್ಯ ಅಕಾಡೆಮಿಯ ಕಾವ್ಯ ಪ್ರಶಸ್ತಿವಿಜೇತ ಕೃತಿ), ಬಾಯಿದೊಂಜಿ ಪಾತೆರೊ, ಬಾಲಕೃಷ್ಣ ಶೆಟ್ಟಿ ಪೊಳಲಿ, ಮುಲ್ಕಿ ಸುಂದರರಾಮ ಶೆಟ್ಟರು. ಕನ್ನಡದಲ್ಲಿ: ಶುಭೋದಯ, ನಿನಗೆ ನನ್ನ ನಮನ ಸುಮನ, ಎನ್.ಎಸ್. ದೇಶಭಕ್ತ, ಸಮಾಜ ಸುಧಾರಕ ಮುಲ್ಕಿ ರಾಮಕೃಷ್ಣ ಪೂಂಜ
ಕನ್ಯಾನದಲ್ಲಿ ೨೦೧೩ರಲ್ಲಿ ನಡೆದ ಗಡಿನಾಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.