ಲೇಖಕ, ಸಂಶೋಧಕ ಶ್ರೀವತ್ಸ ಎಸ್. ವಟಿ ಅವರು ಕನ್ನಡದಲ್ಲಿ ಸ್ನಾತಕೋತ್ತರ ಮತ್ತು ಭಾರತೀಯ ವಾಯದಲ್ಲಿ ಕಾಲಗಣನೆ' ಎಂಬ ವಿಷಯದಲ್ಲಿ ಡಾಕ್ಟರೇಟ್ ಅಧ್ಯಯನ ನಡೆಸಿದ್ದಾರೆ. ಕನ್ನಡ ಪ್ರಾಧ್ಯಾಪಕರಾದ ಅವರು ಕರ್ನಾಟಕದ ಮೂರ್ತಿಶಿಲ್ಪಗಳ ಬಗ್ಗೆ ವಿಶೇಷ ಅಧ್ಯಯನ ನಡೆಸಿದ್ದಾರೆ. ಇದುವರೆಗೆ ಹದಿನೈದು ಕೃತಿಗಳನ್ನು ಪ್ರಕಟಿಸಿರುವ ಶ್ರೀವತ್ಸ ವಟಿಯವರು ಬೇಲೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ ವಹಿಸಿದ್ದರು. 'ಭಾರತೀಯ ಕಾಲಗಣನೆ ವಿಜ್ಞಾನ', 'ವಿಷ್ಣು ಚತುರ್ವಿಂಶತಿ ಮೂರ್ತಿಗಳಲ್ಲಿ ಗಣಿತ ಮತ್ತು ಅಧ್ಯಾತ್ಮ ರಹಸ್ಯ', 'ಹಲ್ಮಡಿ ಶಾಸನ ಒಂದು ಪರಿಚಯ' ಇತ್ಯಾದಿ ಅವರ ಮಹತ್ವದ ಕೃತಿಗಳು.