ಕಲಾವಿದ, ಲೇಖಕ ರಾಮಕೃಷ್ಣ ಕೊಡಂಚ 1968ರಲ್ಲಿ ಜನಿಸಿದರು. ಯಕ್ಷಗಾನ ಕಲಾವಿದರೂ ಆಗಿರುವ ಕೊಡಂಚರು ಬಡಗುತಿಟ್ಟು ಯಕ್ಷಗಾನವನ್ನು ಜಯಂತ್ ಕುಮಾರ್ ತೋನ್ಸೆಯವರಿಂದ, ತೆಂಕುತಿಟ್ಟು ಯಕ್ಷಗಾನವನ್ನು ಮುರಳೀಧರ್ ಭಟ್ ಕಟೀಲ್ ಮುಂತಾದ ಗುರುಗಳ ಬಳಿ ಕಲಿತಿದ್ದಾರೆ. ಮತ್ತು ಉದ್ಯಾವರ ಮಾಧವಾಚಾರ್ಯರ ರಂಗಪ್ರಯೋಗಗಳಲ್ಲಿ ಭಾಗವಹಿಸಿದ್ದಾರೆ. ಉಡುಪಿಯ ಅಕಾಡೆಮಿ ಕಲಾಶಾಲೆಯಲ್ಲಿ ನೃತ್ಯ ಗುರುವಾಗಿ ಸೇವೆಸಲ್ಲಿಸುತ್ತಿದ್ದಾರೆ. ‘ಕೊಡವೂರು ಭಾಗವತ ಮಾಧವ ರಾವ್’ ಜೀನಾಧಾರಿತ ಕೃತಿ ಅವರದೆ ಹೆಸರಿನಲ್ಲಿ ರಚಿಸಿದ್ದಾರೆ.