ಲೇಖಕ, ವೃತ್ತಿ ಮಾರ್ಗದರ್ಶಕ ಬಿ. ಎ. ಆಚಾರ್ಯ ಅವರು ಮಣಿಪಾಲ ತಾಂತ್ರಿಕ ಮಹಾವಿದ್ಯಾಲಯದಲ್ಲಿ (ಎಂ.ಐ.ಟಿ.) 38 ವರ್ಷ ಅಧ್ಯಾಪಕರಾಗಿ ನಿವೃತ್ತರಾದವರು. ಪ್ರಸ್ತುತ ಮಣಿಪಾಲದಲ್ಲಿರುವ ಉಡುಪಿ ಸಮೂಹ ಸಂಸ್ಥೆಯಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ತಮ್ಮ ಅನುಭವವನ್ನು ಧಾರೆ ಎರೆಯುತ್ತಿದ್ದಾರೆ. ಅವರು ಅನೇಕ ತಾಂತ್ರಿಕ ಆವಿಷ್ಕಾರಗಳನ್ನು ಮಾಡಿದ್ದಾರೆ. 'Elipso Graph' ಎನ್ನುವ ದೀರ್ಘವೃತ ರಚಿಸುವ ಸಾಧನ ಪ್ರಮುಖವಾಗಿದೆ. ಅವರು `ಎಸ್.ಎಸ್.ಎಲ್.ಸಿ./ಪಿ.ಯು.ಸಿ. ಬಳಿಕ ಮುಂದೇನು?' ಶೀರ್ಷಿಕೆಯ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣದ ಮಾರ್ಗದರ್ಶನ ಮಾಡುತ್ತಿದ್ದಾರೆ. ನಿವೃತ್ತಿಯ ಬಳಿಕ ಅವರು ಮೂಡಬಿದ್ರೆಯ ಎಸ್.ಕೆ.ಎಫ್. ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಶಿಕ್ಷಣ ಸಲಹೆಗಾರರಾಗಿ ಸೇವೆಸಲ್ಲಿಸಿದ್ದಾರೆ. ಉಡುಪಿ ಜಿಲ್ಲಾ ವಿಶ್ವಬ್ರಾಹ್ಮಣ ಸಮಾಜದ ವಿವಿಧ ಸಂಘಟನೆಗಳಲ್ಲಿ ಪದಾಧಿಕಾರಿಯಾಗಿದ್ದು ಸಮಾಜಕ್ಕೆ ಮಾರ್ಗದರ್ಶನ ನೀಡಿದ್ದಾರೆ. 'ಸಹಚಿಂತನ' ಎಂಬ ಮಾಸಪತ್ರಿಕೆಯ ಗೌರವ ಪ್ರಧಾನ ಸಂಪಾದಕರು.