ಡಾ. ದಿನಕರ ಎಸ್. ಪಚ್ಚನಾಡಿಯವರು ಮಂಗಳೂರಿನ ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿದ್ದಾರೆ. 'ಯಕ್ಷಗಾನ ಮೀಮಾಂಸೆ' ಎಂಬ ಪ್ರಬಂಧ ಮಂಡಿಸಿ ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ಡಿ.ಲಿಟ್. ಪದವಿಯನ್ನು ಪಡೆದಿರುವ ಅವರು ಯಕ್ಷಗಾನ ಚಿಂತಕ ಮಾತ್ರವಲ್ಲ, ಯಕ್ಷಗಾನ ಕಲಾವಿದರೂ ಹೌದು. ರಾಜಾದಂಡಕ, ವೀರ ತರಣಿಸೇನ, ಪಾಂಚಜನ್ನೋತ್ಪತ್ತಿ, ಕದ್ರಿ ಕ್ಷೇತ್ರಮಹಾತ್ಮ, ಆದಿಚುಂಚನಗಿರಿ ಕ್ಷೇತ್ರಮಹಾತ್ಮ, ಮಾನಾದಿಗೆದ ಮಣೆ, ಏಸು ಕ್ರಿಸ್ತ ಮಹಾತ್ಮ ಮೊದಲಾದ ೧೫ಕ್ಕೂ ಮಿಕ್ಕಿ ಯಕ್ಷಗಾನ ಪ್ರಸಂಗಗಳ ರಚನೆ ಮಾಡಿರುವ ಅವರು 'ಸಂಜೀವಿನಿ ಮಂತ್ರ', 'ಜೀವನ ಜೋಪಾನ', 'ಅಗೋಳಿ ಮಂಜಣ್ಣೆ' (ನಾಟಕಗಳು), 'ಭ್ರಾಮರಿ ಛಂದೋರವಿಂದ ಮಾಲಾರ್ಚನ ಸ್ತೋತ್ರಂ', 'ಕಂದ ಪಂಚಕ (ಖಂಡಕಾವ್ಯಗಳು) ಮುಂತಾದ ಇತರ ಕೃತಿಗಳನ್ನು ಪ್ರಕಟಿಸಿದ್ದಾರೆ.