ದಕ್ಷಿಣ ಕನ್ನಡದ ಬದುಕು ಮತ್ತು ಪ್ರಕೃತಿಯನ್ನು ತಮ್ಮ ಕಾದಂಬರಿಗಳಲ್ಲಿ ಚಿತ್ರಿಸಿ ಸಾಹಿತ್ಯ ಕೃತಿಗಳಾಗಿಸಿದ ಕಾದಂಬರಿಕಾರ ಜನಾರ್ದನ ಗುರ್ಕಾರ್. ಅವರು 1932 ನವೆಂಬರ್ 26ರಂದು ಮೂಡಬಿದಿರೆಯ ಸಮೀಪದ ಅಶ್ವತ್ಥಪುರದ ಬಳಿಯ ಮುದ್ರಬೆಟ್ಟುವಿನಲ್ಲಿ ಜನಿಸಿದರು.
'ಪರಾವಲಂಬಿ', 'ಕೈಮಾಂಸ', 'ಕಾಂತೆಯರ ಕನಸು', 'ದಂಬನ ನಾರು', 'ಗಂಗಾವತಾರ', 'ಗುಡಿಯ ಸುತ್ತಮುತ್ತ' ಮುಂತಾದ 18 ಕಾದಂಬರಿಗಳು. ಎರಕು ಕಥಾಸಂಕಲನಗಳು; ಪ್ರಬಂಧ, ವಿಚಾರ ಸಾಹಿತ್ಯ ಮುಂತಾದ ಪ್ರಕಾರಗಳ ಆರು ಕೃತಿಗಳು ಜನಾರ್ದನ ಗುರ್ಕಾರರನ್ನು ಕನ್ನಡದ ಒಬ್ಬ ಮುಖ್ಯ ಲೇಖಕರನ್ನಾಗಿ ಸ್ಥಾಪಿಸಿವೆ. ಮೂಡಬಿದ್ರಿಯ ಬಳಿಯ ಅಶ್ವತ್ಥಪುರಕ್ಕೆ ಸಮೀಪವಿರುವ ಮುದ್ರಬೆಟ್ಟಿನಲ್ಲಿ ಜನಿಸಿದ (1932) ಗುರ್ಕಾರ್ ರೈಲ್ವೆ ಇಲಾಖೆಯ ಅಧಿಕಾರಿಯಾಗಿ ಸೇವೆ ಸಲ್ಲಿಸಿ ಮೈಸೂರಿನಲ್ಲಿ ನೆಲೆಸಿದ್ದ ಅವರು 2015ರಲ್ಲಿ ನಿಧನರಾದರು.