ರವಿಶಂಕರ ಜಿ.ಕೆ.(ಜನನ 1991) ವಿವೇಕಾನಂದ ಕಾಲೇಜಿನಲ್ಲಿ ವರ್ಮುಡಿಯವರ ಶಿಷ್ಯರಾಗಿದ್ದವರು. ಪ್ರಸ್ತುತ ಕಾಸರಗೋಡಿನ ಸರಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗದಲ್ಲಿ ಯುಜಿಸಿಯ ಜೆ.ಆರ್.ಎಫ್. ಶಿಷ್ಯವೇತನದೊಂದಿಗೆ ಕ್ರಿ.ಶ. 850 ರಿಂದ ಕ್ರಿ.ಶ. 1400ರವರೆಗಿನ ಕನ್ನಡ ಸಾಹಿತ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು 'ಕನ್ನಡ ಸಾಹಿತ್ಯದಲ್ಲಿ ಪ್ರಾಣಿ ರೂಪಕಗಳು: ಅನ್ಯತೆಯ ಅನುಸಂಧಾನ' ಎಂಬ ವಿಷಯದ ಕುರಿತಾಗಿ ಪಿಹೆಚ್.ಡಿ. ಅಧ್ಯಯನ ನಡೆಸುತ್ತಿದ್ದಾರೆ. ಮೊದಲ ಯತ್ನದಲ್ಲಿ ಯುಜಿಸಿ ನಡೆಸುವ ಉಪನ್ಯಾಸಕರ ಅರ್ಹತಾ ಪರೀಕ್ಷೆಯಲ್ಲಿ ಮತ್ತು ಕರ್ನಾಟಕ ಸರಕಾರ ನಡೆಸುವ ಉಪನ್ಯಾಸಕರ ಅರ್ಹತಾ ಪರೀಕ್ಷೆಯಲ್ಲಿ ಮೊದಲ ಯತ್ನಕ್ಕೆ ತೇರ್ಗಡೆಯಾಗಿದ್ದಾರೆ. ಕುಪ್ಪಂನ ದ್ರಾವಿಡ ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ.ಎ.ನಲ್ಲಿ ವಿಶ್ವವಿದ್ಯಾಲಯಕ್ಕೆ ಮೊದಲ ಸ್ಥಾನ ಪಡೆದುದಕ್ಕೆ ಆಂದ್ರ ಸರಕಾರದ ಪ್ರತಿಭಾ ಆವಾರ್ಡ್' ವಿಶೇಷ ಪುರಸ್ಕಾರ ಲಭಿಸಿದೆ. ಸುಧಾ, ಮಂಗಳ, ವಿಜಯಕರ್ನಾಟಕ, ಉದಯವಾಣಿ, ಹಸಿರುವಾಸಿ ಮುಂತಾದ ಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟವಾಗಿದೆ.