ಕವಿ, ಕತೆಗಾರ ಜಯರಾಮ ಕಾರಂತರು ಪತ್ರಕರ್ತರಾಗಿ ಜನಪ್ರಿಯ. ಪ್ರತಿಭಾವಂತ ಬರೆಹಗಾರ. ಬದುಕಿನ ತಲ್ಲಣ ಮತ್ತು ಅದರಿಂದ ಹೊರಬರಲು ತವಕಿಸುವ ಕ್ಷಣದ ನಡುವಿನ ಅನುಭವ ಮತ್ತು ಅನುಭಾವವನ್ನು ಅವರಷ್ಟು ಸೂಕ್ಷ್ಮವಾಗಿ ನವಿರಾಗಿ ಹೇಳುವ ಕವಿಗಳು ಅಪರೂಪ. ’ವಲಸೆ ಬಂದ ಹಕ್ಕಿ’, ’ನೆಲಗುಲಾಬಿಯ ಹುಟ್ಟು’, 'ಬಿದ್ದ ಪ್ರತಿಮೆ’, ’ಮುಕ್ಕಾಲು ಪದ್ಯಗಳು' ಅವರ ಕವನ ಸಂಗ್ರಹಗಳು. ’ನಾಯಕನಿಗೆ ನಮನ’, ’ಉಡುಪಿ ಜಿಲ್ಲೆಯ ಕಾವ್ಯ’, ’ಮುದ್ದಣ್ಣನಿಗೆ ನಮನ’, ’ಮೊಗಸಾಲೆ ಐವತ್ತರ ಹೊತ್ತಿಗೆ’, ’ಮುದ್ದಣ ಪುರಸ್ಕಾರ' ಮೊದಲಾದ ಗ್ರಂಥಗಳನ್ನು ಸಂಪಾದಿಸಿದ್ದಾರೆ. ನೂರಾರು ಮುಕ್ಕಾಲು ಪದ್ಯಗಳನ್ನು ಬರೆದಿರುವ ಅವರು ಇಂಥ ಒಂದು ಹೊಸ ಛಂದಸ್ಸಿನ ರೂವಾರಿ. ಕಡೆಂಗೋಡ್ಲು ಕಾವ್ಯ ಪ್ರಶಸ್ತಿ, ಪೆರ್ಲ ಪ್ರತಿಷ್ಠಾನ ಪ್ರಶಸ್ತಿಯನ್ನು ಪಡೆದಿರುವ ಕಾರಂತರು 'ತರಂಗ' ವಾರಪತ್ರಿಕೆ ಉಪಸಂಪಾದಕರೂ ಹೌದು.