ಪರೀಕ್ಷಿತ ತೋಳ್ಪಾಡಿ ಅವರು ಪುತ್ತೂರಿನ ಅಂಬಿಕಾ ವಿದ್ಯಾಲಯದಲ್ಲಿ ಸಂಸ್ಕೃತ ಉಪನ್ಯಾಸಕರು. ತಮ್ಮ ತಂದೆ ಖ್ಯಾತ ಚಿಂತಕ ಲಕ್ಷ್ಮೀಶ ತೋಳ್ಪಾಡಿಯವರಂತೆ ಸಂಸ್ಕೃತ ಕನ್ನಡ-ಇಂಗ್ಲಿಷ್ ಸಾಹಿತ್ಯಗಳಲ್ಲಿ ವಿಹರಿಸಿರುವ ಪರೀಕ್ಷಿತ ತೋಳ್ಪಾಡಿಯವರು ಖ್ಯಾತ ಸಂಸ್ಕೃತ ವಿದ್ವಾಂಸ ಪಾದೆಕಲ್ಲು ನರಸಿಂಹ ಭಟ್ಟರಲ್ಲಿ ವಿಶೇಷಾಧ್ಯಯನ ನಡೆಸಿದ್ದಾರೆ. ಪರೀಕ್ಷಿತರಿಗೆ ಕೃಷಿಯಲ್ಲಿ ವಿಶೇಷಾಸಕ್ತಿ, ಶಾಂತಿಗೋಡಿನ ಕೃಷಿಭೂಮಿಯಲ್ಲಿ ಕಾಡಿನೊಂದಿಗೆ ಕೃಷಿ ಚಟುವಟಿಕೆ ಗಳನ್ನು ನಡೆಸುತ್ತಿರುವ ಅವರು ಸುಭಾಷ್ ಪಾಲೇಕರ್ ಅವರ ಕೃಷಿ ಪದ್ಧತಿಯ ಕುರಿತು ಒಂದು ಪರಿಚಯ ಪುಸ್ತಕ ಬರೆದಿದ್ದಾರೆ. ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳಲ್ಲಿ – ವಿಶೇಷಾಂಕಗಳಲ್ಲಿ ಹಲವು ಕವಿತೆ - ಲೇಖನಗಳು ಅಚ್ಚಾಗಿವೆ.