ವಿ.ಸೀ. ಅವರ ಬೆಲೆಬಾಳುವ ಬರಹಗಳು-ವಿಮರ್ಶಕ ಜಿ.ಎಸ್. ಆಮೂರ ಅವರ ಕೃತಿ. ಹೆಸರಾಂತ ಸಾಹಿತಿ ವಿ.ಸೀ. ಅವರ ಓದಿನ ಆಳ, ವಿಸ್ತಾರ, ವೈವಿಧ್ಯತೆಗಳು ಅಗಾಧ. ಚಿತ್ರಕಲೆ, ಸಂಗೀತ, ಶಿಲ್ಪ, ಸಾಹಿತ್ಯ, ಜ್ಞಾನ-ವಿಜ್ಞಾನ, ಕಾವ್ಯ, ನಾಟಕ, ಪ್ರಬಂಧ, ವ್ಯಕ್ತಿಚಿತ್ರಗಳು, ವಿಮರ್ಶೆ, ಶಾಸ್ತ್ರ, ಅನುವಾದ ಹೀಗೆ ಬಹುಮುಖೀಯ ಆಸಕ್ತಿ. ವಿ.ಸೀ.ಯವರು ಕನ್ನಡ ಸಾಹಿತ್ಯಕ್ಕೆ ನೀಡಿರುವ ಕೊಡುಗೆಗಳು ಅಪಾರವಾಗಿದ್ದು, ಅವುಗಳ ಶಾಸ್ತ್ರೀಯ ಅಧ್ಯಯನದ ಮುಂದುವರಿಕೆಯಾಗಿ ವಿಮರ್ಶಕ ಜಿ.ಎಸ್. ಆಮೂರ ಅವರು ಶೋಧಿಸಿದ್ದೇ ಈ ಕೃತಿ.
ಪುಸ್ತಕದ ಪ್ರಸ್ತಾವನೆಯಲ್ಲಿ ಸ್ವತಃ ವಿಮರ್ಶಕ ಜಿ.ಎಸ್. ಆಮೂರ ಹೇಳುವಂತೆ ‘ಕನ್ನಡ ಸಾಹಿತ್ಯ ಪರಂಪರೆಯಲ್ಲಿ ವಿ.ಸೀ. ಅವರ ಅವರ ಸ್ಥಾನ ಅನಿರ್ದಿಷ್ಟವಾಗಿಯೇ ಉಳಿದಿದೆ. ಇದಕ್ಕೆ ಕಾರಣಗಳನ್ನು ಶೋಧಿಸುವಲ್ಲಿ ನನ್ನ ಶಕ್ತಿಯನ್ನು ವಿನಿಯೋಗಿಸುವ ಬದಲು ಇಂದಿಗೂ ಪ್ರಸ್ತುತವೆನಿಸುವ ಅವರ ಬರಹಗಳನ್ನು ಸಂಕಲಿಸಿ ಓದುಗರನ್ನು ಪ್ರಭಾವಿಸಲೆತ್ನಿಸುವುದು ನನಗೆ ಸೂಕ್ತವಾಗಿ ಕಂಡಿತು. ಹೀಗಾಗಿ ಈ ಸಂಕಲನ ನಿಮ್ಮೆದುರಿಗಿದೆ’ ಎಂದು ವಿ.ಸೀ. ಅವರ ಸಾಹಿತ್ಯಕ ಎತ್ತರವನ್ನು ಹಾಗೂ ಅಂತಹ ಮೇರು ವ್ಯಕ್ತಿತ್ವವನ್ನು ತಿಳಿಸುವ ತಮ್ಮ ಸಣ್ಣ ಪ್ರಯತ್ನ ಎಂಬುದಾಗಿ ಹೇಳಿಕೊಂಡಿದ್ದಾರೆ.
©2024 Book Brahma Private Limited.