ಲೇಖಕ ಕೂಡ್ಲಿ ಗುರುರಾಜ ಅವರ ಸಂಪಾದಿತ ಪುಸ್ತಕ ಸುಧರ್ಮಾ. ಐದು ದಶಕ ಕಂಡ ಜಗತ್ತಿನ ಏಕೈಕ ಸಂಸ್ಕೃತ ದಿನಪತ್ರಿಕೆ. ಪಾರಂಪರಿಕ ನಗರಿ ಮೈಸೂರಿನ ಹೆಮ್ಮೆಯ ಸಂಗತಿಗಳಲ್ಲಿ ಸುಧರ್ಮಾ ಕೂಡ ಒಂದು. ಭಾರತೀಯ ಸಂಸ್ಕೃ ತ ಪತ್ರಿಕೋದ್ಯಮದಲ್ಲಿ ಸುಧರ್ಮಾ ಒಂದು ಕ್ರಾಂತಿಕಾರಕ ಹೆಜ್ಜೆ. ಪ್ರಚಲಿತ ವಿದ್ಯಮಾನಗಳ ಮಾಹಿತಿಯನ್ನು ಸಂಸ್ಕೃತ ಭಾಷೆಯಲ್ಲೂ ಪರಿಣಾಮಕಾರಿಯಾಗಿ ಬರೆದು ಓದುಗರೊಂದಿಗೆ ಸಂವಹನ ನಡೆಸಬಹುದು ಎಂದು ತೋರಿಸಿ ಕೊಡುವುದೇ ಈ ಪತ್ರಿಕೆಯ ಸಂಸ್ಥಾಪಕರಾದ ಪಂಡಿತ ಕಳಲೆ ನಡಾದೂರ್ ವರದರಾಜ ಅಯ್ಯಂಗಾರ್ ಅವರ ಉದ್ದೇಶವಾಗಿತ್ತು. ಅದರಲ್ಲಿ ಅವರು ಸಫಲರಾದರು. ವರದರಾಜ ಅಯ್ಯಂಗಾರ್ ಬದುಕಿದ್ದರೆ ಅವರಿಗೆ 101 ವರ್ಷವಾಗಿರುತ್ತಿತ್ತು. ಈ ಪುಸ್ತಕ ಒಂದು ರೀತಿ Making of Sudharma ಇದ್ದಂತೆ. ಸುಧರ್ಮಾ ಹುಟ್ಟು, ಬೆಳವಣಿಗೆ ಏಳು- ಬೀಳುಗಳು, ಸಂಸ್ಕೃತ ಭಾಷೆಯ ಪ್ರಚಾರದಲ್ಲಿ ಸುಧರ್ಮಾ ಪಾತ್ರ ಎಲ್ಲವನ್ನೂ ಈ ಕೃತಿಯಲ್ಲಿ ದಾಖಲಿಸಿದ್ದೇನೆ. ಭಾರತೀಯ ಸಂಸ್ಕೃತ ಪತ್ರಿಕೋದ್ಯಮದ ಹುಟ್ಟು, ಬೆಳವಣಿಗೆಯನ್ನು ಚಿತ್ರಿಸಿದ್ದೇನೆ. ಸುಧರ್ಮಾ ಹಾಗೂ ಭಾರತೀಯ ಸಂಸ್ಕೃತ ಪತ್ರಿಕೋದ್ಯಮ ಕುರಿತು ಕನ್ನಡದಲ್ಲಿ ಪ್ರಕಟವಾದ ಮೊದಲ ಕೃತಿ ಇದು. ಶಾಲಾ-ಕಾಲೇಜಿನಲ್ಲಿ ಸಂಸ್ಕೃತವನ್ನು ಪ್ರಥಮ ಭಾಷೆಯಾಗಿ ನಾನು ವ್ಯಾಸಂಗ ಮಾಡಿದ್ದೇ ಈ ಕೃತಿ ಬರೆಯಲು ಮೂಲ ಪ್ರೇರಣೆ ಎಂದು ಲೇಖಕರೇ ತಿಳಿಸಿದ್ದಾರೆ.
©2024 Book Brahma Private Limited.