ಸಿರಿ ಕನ್ನಡ: ನುಡಿ ತೋರಣ ಎಂಬುದು ಲೇಖಕಿ ಶೈಲಜಾ ಶರಣಗೌಡ ಅವರು ಸಂಪಾದಿತ ಕೃತಿ. ಕನ್ನಡ ಸಾಹಿತ್ಯದ ಎಲ್ಲ ಕಾಲಘಟ್ಟಗಳಲ್ಲಿ ಹುದುಗಿರುವ ಕಾವ್ಯೋಕ್ತಿಗಳನ್ನು ಹುಡುಕಿ, ಕೃತಿರೂಪದಲ್ಲಿ ಕಟ್ಟಿಕೊಡುವ ಪ್ರಯತ್ನವಿದು. ಜಾಗತೀಕರಣದ ಈ ಸಂದರ್ಭದಲ್ಲಿ ಕನ್ನಡ ಭಾಷೆ ಮತ್ತು ಸಾಹಿತ್ಯ ಅತ್ಯಂತ ಸಂದಿಗ್ದ ಸ್ಥಿತಿಯಲ್ಲಿವೆ. ಕಂಪ್ಯೂಟರ್, ಮೊಬೈಲ್ ಗಳ ಭರಾಟೆಯಲ್ಲಿ ಕನ್ನಡ ಸಾಹಿತ್ಯ ಕೃತಿಗಳನ್ನು ಬರೆಯುವರು ಮತ್ತು ಓದುವವರು ತುಂಬಾ ಕಡಿಮೆ. ಕನ್ನಡ ಸಾಹಿತ್ಯದ ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಲೇಖಕಿಯು ಈ ಕೃತಿಯ ಮೂಲಕ ಆಶಾಭಾವನೆ ಮೂಡಿಸುತ್ತಾರೆ. ಕನ್ನಡ ಸಾಹಿತ್ಯದ ಹಳಗನ್ನಡ, ನಡುಗನ್ನಡ ,ಹೊಸಗನ್ನಡ ,ಕೃತಿಗಳ ಅಧ್ಯಯನ ಮಾಡಿ ಅವುಗಳಲ್ಲಿನ ಕಾವ್ಯ್ಯೋಕ್ತಿಗಳನ್ನು ಸಂಗ್ರಹಿಸಿ, ಸಂಪಾದಿಸಿ, ಕೃತಿರೂಪದಲ್ಲಿ ಹೊರ ಹೊರತಂದಿದ್ದು ಗಮನಾರ್ಹ. 'ಅಹಂ ಕಷ್ಟ್o ಸಂಸಾರಂ'- ಶಿವಕೋಟ್ಯಾಚಾರ್ಯ, ' 'ಮನುಷ್ಯ ಜಾತಿ ತಾನೊಂದೆ ವಲಂ'- ಪಂಪ, 'ಗುಣಕ್ಕೆ ಮಚ್ಚರಮಂಟೆ'- ರನ್ನ, 'ಮಾಡಿದುದo ನಾವುಣ್ಣದೇ ಪೊಕುಮೇ '-ಜನ್ನ, 'ಹರನೆಂಬುದೇ ಸತ್ಯ ಸತ್ಯವೆಂಬುದೆ ಹರನು'- ಹರಿಹರ, 'ಕಣ್ಣರಿಯಡಿರ್ದದೆ ಕರುಳರಿಯದೇ '-ರಾಘವಾಂಕ, 'ಜಂಬುಕo ಜನಿಸುವುದು ಸಿಂಗದುದರದೊಳ್'- ಲಕ್ಷ್ಮೀಶ, ಮುಂತಾದ ಕಾವ್ಯಗಳು ಸರ್ವಕಾಲಿಕ ಸತ್ಯವನ್ನು ಸಾರುವಂತಿದೆ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವವರಿಗೆ ಇದೊಂದು ಆಕರ ಗ್ರಂಥ.
©2024 Book Brahma Private Limited.