ಮಹಾಕಾವ್ಯ ಮಹಾಭಾರತವನ್ನು ಪ್ರೊ.ಎಸ್.ಎಲ್. ಶೇಷಗಿರಿ ರಾವ್ ಅವರು ಇಂಗ್ಲಿಷಿನಲ್ಲಿ ಬರೆದಿದ್ದರು. ಇದನ್ನು ಕನ್ನಡಕ್ಕೆ ಜಿ.ಎನ್. ರಂಗನಾಥ ರಾವ್ ಅನುವಾದಿಸಿದ್ದಾರೆ. ನಾಲ್ಕು ಸಂಪುಟಗಳ ಈ ಮಹಾಕಾವ್ಯದ ನಾಲ್ಕನೇ ಸಂಪುಟ ಇದಾಗಿದ್ದು, ಇದರಲ್ಲಿ ಶಾಂತಿ, ಅನುಶಾಸನ, ಆಶ್ವಮೇಧಿಕ, ಆಶ್ರಮವಾಸಿ, ಮೌಸಲ, ಮಹಾಪ್ರಸ್ಥಾನಿಕ ಹಾಗೂ ಸ್ವರ್ಗಾರೋಹಣ ಪರ್ವಗಳ ಕುರಿತು ಬರೆದಿದ್ದಾರೆ. ರಾಗ- ದ್ವೇಷಗಳು, ಛಲ ದ್ವೇಷಗಳು ಬದುಕನ್ನು ನೇಯುವ ಕುರಿತಂತೆ ಕೋಲಾಹಲದ , ಏಳು ಬೀಳುಗಳ, ಚಂಡಮಾರುತದ ಬದುಕಿನ ಬಗ್ಗೆ ಇಲ್ಲಿ ಸವಿಸ್ತಾರವಾಗಿ ಕತೆಯನ್ನು ಕಟ್ಟಿಕೊಡಲಾಗಿದೆ. ಶಾಂತಿ ಪರ್ವದಲ್ಲಿ ಇಂದ್ರ ಮತ್ತು ಬ್ರಾಹ್ಮಣ ಯುವಕರ, ಶಂಖ ಮತ್ತು ಲಿಖಿತರ, ನರಿ ಹಾಗೂ ಹುಲಿಯ, ಸನ್ಯಾಸಿ ಮತ್ತು ನಾಯಿ, ಪ್ರಹ್ಲಾದ ಹಾಗೂ ಇಂದ್ರ, ಕಾಯವ್ಯನ, ಮೂರು ಮೀನುಗಳ, ಪಲಿತ ಮತ್ತು ಲೋಮಶರ, ಬ್ರಹ್ಮದತ್ತ ಮತ್ತು ಪೂಜನಿಯರ, ವಿಶ್ವಾಮಿತ್ರ ಮತ್ತು ಬೇಟೆಗಾರನ, ಹಕ್ಕಿಪಿಕ್ಕಿಯವನ, ಸತ್ತ ಬಾಲಕ, ಅವನ ಬಂಧುಗಳು, ನರಿ ಮತ್ತು ಹದ್ದುಗಳ, ಶಾಲ್ಮಲಿ ವೃಕ್ಷ ಮತ್ತು ಪವನ ದೇವನ, ಗೌತಮ ಮತ್ತು ರಾಜಧರ್ಮ, ಸೇನಜಿತ್ ಮತ್ತು ಬ್ರಾಹ್ಮಣ ಮುಂತಾದ ಕತೆಗಳನ್ನು ವಿವರಿಸಿದ್ದಾರೆ.
©2024 Book Brahma Private Limited.