‘ಶತಮಾನದ ಕನ್ನಡ ಸಾಹಿತ್ಯ’ ಸಮೀಕ್ಷಾ ಸಂಪುಟ-1 ಹಿರಿಯ ವಿಮರ್ಶಕರಾದ ಜಿ.ಎಚ್. ನಾಯಕ ಅವರು ಸಂಪಾದಿಸಿರುವ ಕೃತಿ. ಕೃತಿಯ ಕುರಿತು ಬರೆಯುತ್ತಾ 'ಇಪ್ಪತ್ತನೆಯ ಶತಮಾನದ ಭಾರತದ ಒಟ್ಟೂ ಬದುಕಿನ ಸಂಸ್ಕೃತಿ ಪುನಾರಚನೆಯ ಸಂಕೀರ್ಣವಾದ ಮತ್ತು ಕಠಿಣತಮವಾದ ಸವಾಲನ್ನು ಕನ್ನಡ ಸಾಹಿತ್ಯ ಸಂದರ್ಭದಲ್ಲಿ ನಮ್ಮ ಪ್ರಜ್ಞಾವಂತರು, ಪ್ರತಿಭಾವಂತರು ಹೇಗೆ ಎದುರಿಸಿದ್ದಾರೆ ಎಂಬ ಚರ್ಚೆ ಈ ಸಂಪುಟಗಳ ಮೂಲ ಉದ್ದೇಶ. ವಿಮರ್ಶಾತ್ಮಕ ಸಮೀಕ್ಷಾರೂಪದ ಈ ಅಧ್ಯಯನವು ಕನ್ನಡ ಸಾಹಿತ್ಯ ಲೋಕದ ಸಂವೇದನೆಯ ಸಂಸ್ಕಾರವನ್ನು ಶ್ರುತಿಗೊಳಿಸುವುದರಲ್ಲಿ ಮುಖ್ಯಪಾತ್ರವಹಿಸುತ್ತದೆ. ಇದು ಸಾಹಿತ್ಯದ ವಿದ್ಯಾರ್ಥಿಗಳಿಗೆ, ಸಂಶೋಧಕರಿಗೆ ಆಕರವಾಗುವಲ್ಲಿ ಸಂದೇಹವಿಲ್ಲ. ಈ ಸಂಪುಟದಲ್ಲಿ ಕಾವ್ಯ, ನಾಟಕ, ಕಥೆ, ಕಾದಂಬರಿಯ ಪ್ರಕಾರಗಳಲ್ಲಿನ ಬೆಳವಣಿಗೆಗಳನ್ನು ಇಪ್ಪತ್ತೈದು ವರ್ಷಗಳ ಕಾಲಾವಧಿಯಲ್ಲಿ ಗುರುತಿಸಿದರೆ, ವಿಮರ್ಶೆ, ಸಂಶೋಧನೆ ಹಾಗು ಜಾನಪದ ಸಾಹಿತ್ಯ, ಮಕ್ಕಳ ಸಾಹಿತ್ಯ, ಅಂಕಣ ಸಾಹಿತ್ಯ, ಹಾಸ್ಯ ಸಾಹಿತ್ಯ, ಪ್ರವಾಸ ಸಾಹಿತ್ಯ, ವಿಜ್ಞಾನ ಸಾಹಿತ್ಯ, ಆತ್ಮಕತೆ ಜೀವನ ಚರಿತ್ರೆಗಳನ್ನು ಕುರಿತ ಬರಹಗಳು ಎರಡನೆಯ ಸಂಪುಟದಲ್ಲಿವೆ ಎಂದಿದ್ದಾರೆ ಜಿ . ಎಚ್. ನಾಯಕ.
©2024 Book Brahma Private Limited.