`ರಾಜಧಾನಿಯಿಂದ’ ಕೃತಿಯು ನಿರಂಜನ ಅವರ ಸಂಪಾದಿತ ಅಂಕಣಗಳ ಸಂಕಲನವಾಗಿದೆ. ಕೃತಿಯಲ್ಲಿ 113 ಅಂಕಣಗಳಿವೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ: ‘ರಾಜಧಾನಿಯಿಂದ’ ವರದಿಗಳಲ್ಲ. ನೋಟಕ್ಕೆ ವಸ್ತುನಿಷ್ಠ ಟಿಪ್ಪಣಿ ಅಲ್ಲಲ್ಲಿ, ಗಾಂಭೀತರ್ಯದ ಮುಖವಾಡದ ಸಂದಿಯೊಳಗಿಂದ ಲೇಖಕನ ವ್ಯಕ್ತಿತ್ವ ಮುಗುಳುನಕ್ಕಿರುವುದುಂಟು. ಒಮ್ಮೊಮ್ಮೆ ಮೈ ಕೊಡವಿದಾಗ ಸೂಕ್ಷ್ಮ ವ್ಯಂಗ್ಯವೋ ವಿಡಂಬನೆಯೋ ಬರೆವಣಿಗೆಯಲ್ಲಿ ಬೆರೆತುದುಂಟು! ಎಂದಿದೆ.
ಕನ್ನಡದ ಪ್ರತಿಭಾವಂತ ಲೇಖಕ, ಖ್ಯಾತ ಬರಹಗಾರ ನಿರಂಜನ ಅವರು ಹುಟ್ಟಿದ್ದು 15-06-1924ರಂದು. ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೇಸುಬ್ರಹ್ಮಣ್ಯದ ಸಮೀಪದ ಕುಳಗುಂದದಲ್ಲಿ. ತಾಯಿ ಚೆನ್ನಮ್ಮ. ಸುಳ್ಯದಲ್ಲಿ ಪ್ರಾಥಮಿಕ, ಮಾಧ್ಯಮಿಕ ಶಾಲೆಗಳಲ್ಲಿ ಓದು. ನೀಲೇಶ್ವರದಲ್ಲಿ ಪ್ರೌಢಶಾಲಾ ವಿದ್ಯಾಭ್ಯಾಸ. ಖ್ಯಾತ ವೈದ್ಯೆ, ಲೇಖಕಿ ಅನುಪಮಾ ನಿರಂಜನ ಅವರೊಂದಿಗೆ ವಿವಾಹವಾದರು. ನಿರಂಜನ ಅವರು ಒಬ್ಬ ಖ್ಯಾತ ಬರಹಗಾರ ಹಾಗೂ ಹೋರಾಟಗಾರ. ಅವರ ಮೊದಲ ಹೆಸರು ಕುಳಕುಂದ ಶಿವರಾಯ. ಅವರು 20ನೇ ಶತಮಾನದ ಪ್ರಮುಖ ಲೇಖಕ ಮತ್ತು ಪ್ರಗತಿಪರ ಚಳವಳಿಯ ಮುಂದಾಳು. ಗಾಂಧೀಜಿ, ಕಾರ್ಲ್ ಮಾರ್ಕ್ಸ್, ವ್ಲಾಡಿಮಿರ್ ಲೆನಿನ್ ವಿಚಾರಧಾರೆಗಳಿಂದ ಪ್ರಭಾವಿತರಾದವರು. ಶ್ರ್ರೀಯುತರು ಸುಮಾರು ...
READ MORE