‘ನಮ್ಮ ಸಾಹಿತಿಗಳು’ ಕೃತಿಯು ಬೆಳವಾಡಿ ಮಂಜುನಾಥ ಅವರ ಸಮಕಾಲೀನ ಸಾಹಿತಿಗಳನ್ನು ಪರಿಚಯಿಸುವ ಕೃತಿಯಾಗಿದೆ. ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ : ನಮ್ಮ ಸಾಹಿತಿಗಳು ಎಂಬುದು ಪುಸ್ತಕದ ವರ್ಣನಾತ್ಮಕ ಶೀರ್ಷಿಕೆಯೇ ಧ್ವನಿಸುವಂತೆ, ಸಮಕಾಲೀನ ಸಾಹಿತಿಗಳಲ್ಲಿ ಕೆಲವರನ್ನು ಪರಿಚಯಿಸುವ ಕೃತಿ. ತೀರ ಸಂಕ್ಷಿಪ್ತ ರೂಪದಲ್ಲಿ ಹರಳುಗೊಳಿಸಿ, ಆಐಆ ಲೇಖಕರು ನಡೆದು ಬಂದ ದಾರಿಯನ್ನು ದಾಖಲಿಸುವ ಈ ಪ್ರಯತ್ನದ ಉದ್ದೇಶ ಕೂಡ ಕುಲುಪ್ತವಾದದ್ದು, ಸೀಮಿತವಾದದ್ದು, ವಿಹಂಗಮದೃಷ್ಟಿ, ಪಕ್ಷಿ, ನೋಟ, ಸಿಂಹಾವಲೋಕನ ಎಂಬ ಹೆಸರುಗಳಿಂದ ಬಾನುಲಿ, ದೂರದರ್ಶನ ಮತ್ತು ಇತರ ಪತ್ರಿಕಾದಿ ,ಮಾಧ್ಯಮಗಳಲ್ಲಿ ಪ್ರಕಟವಾಗುವ ಪ್ರಯತ್ನಗಳಿಗೆ ಸಂವಾದಿಯಾಗಿ ನಿಲ್ಲುವ ದಾಟು ಹೆಜ್ಜೆಯ ಪ್ರಯತ್ನ ಈ ಕೃತಿಯಲ್ಲಿದೆ. ಅಂದರೆ ಇದು ದಾರಿಯೇ ಹೊರತು ಗುರಿಯಲ್ಲ, ಕೈ ಮರವೇ ಹೊರತು ನಿಲ್ದಾಣವಲ್ಲ. ಏರಬೇಕಾದ ಎತ್ತರಕ್ಕೆ ಇದು ಉತ್ತಮ ಏಣಿ. ಇಲ್ಲಿನ ಆಯ್ಕೆ ವಿಚಾರವಾಗಿ ಓದುಗರು ಒಂದು ನಿಶ್ಚಳವಾದ ತಿಳುವಳಿಕೆಯನ್ನು ಹೊಂದಿರುವುದು ಅನಿವಾರ್‍ಯ. ಕನ್ನಡದ ಎಲ್ಲ ಶ್ರೇಷ್ಠ ಸಾಹಿತಿಗಳ ಪರಿಚಯವೂ ಇಲ್ಲಿ ಬಂದಿದೆ ಎಂಬ ಭ್ರಾಂತಿಯ ಗ್ರಹಿಕೆಯಿಂದ ಹೊರಡಬಾರದು. ಏಕೆಂದರೆ ಇಂಥ ಒಂದು ಪರಿಮಿತ ಗಾಥ್ರದ ಪುಸ್ತಕದಲ್ಲಿ ಅದು ಸಾಧ್ಯವಾಗುವುದಿಲ್ಲ. ಈ ಬಗೆಯ ಮಿತಿಗೆ ಲೇಖಕರು ಕಾರಣರಾಗುವುದಿಲ್ಲ. ಜತೆಗೆ ಇಲ್ಲಿ ಪರಿಚಯಿಸಾಗಿರುವ ಸಾಹಿತಿಗಳೆಲ್ಲ ಒಂಧೇ ಎತ್ತರ ಮತ್ತು ವ್ಯಾಪ್ತಿಯ ಮಹತ್ವದ ಲೇಖಕರೆಂದು ತೀರ್ಮಾನಿಸಬೇಕಾಗಿಲ್ಲ. ಇಡೀ ಕರ್ನಾಕದ ಭೌಗೋಳಿಕ ವ್ಯಾಪ್ತಿಯಲ್ಲಿ ಮತ್ತು ಇಂದು ಕನ್ನಡದಲ್ಲಿ ಪ್ರಚಲಿತವಾಗಿರುವ ನೂರಾರು ಲೇಖಕರಲ್ಲಿ ಕೆಲವು ಲೇಖಕರನ್ನು ಮಾತ್ರ ಆಯ್ಕೆಮಾಡಿಕೊಳ್ಳಲಾಗಿದೆ.
©2024 Book Brahma Private Limited.