ಮಿರಾಕಲ್ ಆಫ್ ಮೈಂಡ್ ಫುಲ್ ನೆಸ್

Author : ಸುಭಾಷ್ ರಾಜಮಾನೆ

Pages 112

₹ 125.00




Year of Publication: 2023
Published by: ಆಕಾರ ಪ್ರಕಾಶನ
Address: #511,10th Main M.C.Layout, vijayanagara Bengaluru 560040
Phone: 8073397463

Synopsys

"ಮಿರಾಕಲ್ ಆಫ್ ಮೈಂಡ್‌ ಫುಲ್ ನೆಸ್" ಲೇಖಕ ಸುಭಾಷ್ ರಾಜಮಾನೆ ಅವರ ಸಂಕಲನದ ಕೃತಿ. ಆಚ್ ನಾತ್ ಹಾನ್ ಅವರ ಮಾತು, ಪ್ರವಚನ, ಉಪದೇಶಗಳನ್ನು ಆಧರಿಸಿದ ಸಂಕಲನದ 'ಮಿರಾಕಲ್ ಆಫ್ ಮೈಂಡ್‌ ಫುಲ್ ನೆಸ್' ಕೃತಿಯ ಅನುವಾದವಾಗಿರುವ ಈ ಪುಸ್ತಕವು ಆಧುನಿಕ ಮನುಷ್ಯನ ಕೆಲವು ಆಧ್ಯಾತ್ಮಿಕ ಗೊಂದಲಗಳಿಗೆ ಸರಳ ಉತ್ತರವನ್ನು ನೀಡುತ್ತದೆ . 'ಮೈಂಡ್‌ ಫುಲ್‌ನೆಸ್‌' ಎಂಬ ಪದವನ್ನು ರಾಜಮಾನೆ 'ಮನೋಮಗ್ನತೆ' ಎಂದು ಟಂಕಿಸಿದ್ದಾರೆ. ಈ ಶಬ್ದದ ಮೂಲಕವೇ ಕೃತಿಯಲ್ಲಿನ ಅನುವಾದದ ಗುಣಾತ್ಮಕತೆ ಇಲ್ಲಿನ ಭಾಷೆ ಸರಳವಾಗಿದೆ. ಓದುಗರು ಕೃತಿಯಲ್ಲಿ ಕಣ್ಣಾಡಿಸತೊಡಗಿದ್ದೇ ತಲ್ಲೀನರಾಗುವ ಗುಣವನ್ನು ಪಡೆದಿದೆ.

About the Author

ಸುಭಾಷ್ ರಾಜಮಾನೆ
(01 June 1980)

ಲೇಖಕ, ಅನುವಾದಕ ಸುಭಾಷ್ ರಾಜಮಾನೆ ಅವರು ಮೂಲತಃ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕುಸನಾಳದವರು. ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಬಿ.ಎ, ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ.ಎ ಸ್ನಾತಕೋತ್ತರ ಪದವಿ, ಮಂಗಳೂರು ವಿಶ್ವವಿದ್ಯಾನಿಲಯದಿಂದ ಬಿಎಡ್ ಪದವಿ ಹಾಗೂ ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿರುವ ಅವರು ಪ್ರಸ್ತುತ ಸರ್ಕಾರಿ ರಾಮನಾರಾಯಣ್ ಚೆಲ್ಲಾರಾಮ್ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅನುವಾದಿಸಿರುವ ಕೃತಿಗಳು: `ದಿ ಆರ್ಟಸ್ಟ್' (ಮೈಕೆಲ್ ಹಜನ್ ವಿಸಿಯಸ್), 'ಬದುಕಿನ ಅರ್ಥವನ್ನು ಹುಡುಕುತ್ತಾ...' (ವಿಕ್ಟರ್ ಫ್ರಾಂಕ್ಲ್), 'ಮುಳುಗದಿರಲಿ ಬದುಕು' (ಎಪಿಕ್ಟೇಟಸ್), 'ರಾತ್ರಿಗೆ ಸಾವಿರ ಕಣ್ಣುಗಳು' (ಅಲೆಸ್ಸಂಡ್ರೋ ...

READ MORE

Related Books