‘ಕೊಪ್ಪಳ ಜಿಲ್ಲೆಯ ಅನುಭಾವಿ ಕವಿಗಳು’ ಲೇಖಕ ಡಾ. ಬಸವರಾಜ ಸಬರದ ಅವರ ಸಂಶೋಧನಾತ್ಮಕ ಕೃತಿ. ಸಂಶೋಧನಾ ಕ್ಷೇತ್ರದಲ್ಲಿ ನನ್ನ ಆಸಕ್ತಿ ಇದ್ದದ್ದು ಹೈದ್ರಾಬಾದ ಕರ್ನಾಟಕದ ತತ್ವಪದಕಾರರ ಬಗೆಗೆ. ಹೀಗಾಗಿ ಈ ಇಪ್ಪತ್ತು ವರ್ಷಗಳಲ್ಲಿ ಈ ವಿಷಯಕ್ಕೆ ಸಂಬಂಧಿಸಿದಂತೆ ನನ್ನ ಚಿಂತನೆ, ಚರ್ಚೆ, ಕ್ಷೇತ್ರಕಾರ್ಯ ನಡದೇ ಇದೆ. 1995ರಲ್ಲಿ ಕನ್ನಡ ವಿಶ್ವವಿದ್ಯಾಲಯದಿಂದ ಗುಲಬರ್ಗಾ ಜಿಲ್ಲೆ ಅನುಭಾವಿ ಕವಿಗಳು, 2001ರಲ್ಲಿ ರಾಯಚೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ರಾಯಚೂರ ಜಿಲ್ಲೆಯ ಅನುಭಾವಿ ಕವಿಗಳು ಹಾಗೂ 2001ರಲ್ಲಿ ವಿಶ್ವಗುರು ಬಸವಧರ್ಮಕೇಂದ್ರ ಹುಲಸೂರದಿಂದ ಬೀದರ ಜಿಲ್ಲೆಯ ಅನುಭಾವಿ ಕವಿಗಲು ಕೃತಿಗಳು ಪ್ರಕಟವಾಗಿವೆ. ಕೊಪ್ಪಳ ಜಿಲ್ಲೆಯ ಅನುಭಾವಿ ಕವಿಗಳ ಬಗೆಗೆ ಕೃತಿ ಬಂದಿರಲಿಲ್ಲ, ಈಗ ಆ ಅವಕಾಶವನ್ನು ಪ್ರಸಾರಾಂಗ ನೀಡಿದೆ ಎಂದಿದ್ದಾರೆ ಲೇಖಕ ಬಸವರಾಜ ಸಬರದ. ಈ ಕೃತಿಯಲ್ಲಿ ತತ್ತ್ವಪದ ವಿಶ್ಲೇಷಣೆ, ಕೊಪ್ಪಳ ಜಿಲ್ಲೆಯ ವಿಶಿಷ್ಟತೆ, ಕೊಪ್ಪಳ ಜಿಲ್ಲೆಯ ಅನುಭಾವಿ ಕವಿಗಳು- ಹೇರೂರು ವಿರುಪಣ್ಣ, ವಡಕಿ ತಾತಪ್ಪಯ್ಯ, ಬನ್ನಿಕೊಪ್ಪದ ಅಮರಾನಥಶಾಸ್ತ್ರಿ, ಹುಡೇಜಾಲಿ ಮಹಾದೇವಗೌಡ, ಮರಕುಂಬಿ ರುದ್ರೇಶತಾತಾ, ಹುಲಕಾವಟಗಿ ಹನುಮಂತಪ್ಪ, ಕೊಪ್ಪಳದ ಶಿವಶಾಂತವೀರಸ್ವಾಮಿಗಳು, ಹುಲಿಹೌದರ ಗುಂಡಪ್ಪ ಚೆನ್ನದಾಸರ, ತಾಳಕೇರಿ ಬಸವರಾಜ, ಅಲ್ಲಾನಗರದ ಇಮಾಮಸಾಬ, ದ್ಯಾಂಪುರದ ಎಸ್.ಕೆ.ಸಂಗಯ್ಯ, ಹಾಬಲಗಟ್ಟಿ ಚಿದಾನಂದಯ್ಯ ಹಿರೇಮಠ, ರಾಜೂರಿನ ರಾಮಣ್ಣ ಪರಸಪ್ಪ, ಕುಕನೂರಿನ ಬಸವರಾಜ ಸಬರದ, ರುದ್ರೇಶ ತಾತನ ಶಿಷ್ಯಬಳಗ, ಗವಿಮಠದ ಶಿಷ್ಯ ಪರಂಪರೆ. ಜೊತೆಗೆ ಸಮಾರೋಪ, ಅನುಬಂಧ-ತಲಾ ಒಂದು ತತ್ವಪದ, ತತ್ವಪದಕಾರರ ಅಂಕಿತಗಳು, ಕೊಪ್ಪಳ ಜಿಲ್ಲೆಯ ನಕಾಶ ಸಂಕಲನಗೊಂಡಿವೆ.
©2024 Book Brahma Private Limited.