‘ಕನ್ನಡದಲ್ಲಿ ಕ್ರೈಸ್ತ ಸಾಹಿತ್ಯ, ಹನಿಗತೆ, ಕಂಪ್ಯೂಟರ್, ಇತ್ಯಾದಿ’ ಲೇಖಕ ಡಾ.ಶ್ರೀನಿವಾಸ ಹಾವನೂರರ ಲೇಖನ ಸಂಕಲನ. ಈ ಕೃತಿಯ ಕುರಿತು ವಿವರಿಸುತ್ತಾ ಹೊಸಗನ್ನಡದ ಅರುಣೋದಯದಲ್ಲಿ(ಮೈಸೂರು ವಿ.ವಿ.1974), ಬಂದಿರುವ ಹಲವಾರು ಅಂಶಗಳು ಇಲ್ಲಿಯ 3-4 ಲೇಖನಗಳಲ್ಲಿ ಮತ್ತೆ ಕಾಣಿಸಿಕೊಂಡಿವೆ. ಮಾಹಿತಿ ಹಲವು ಹತ್ತು ಕಡೆ ಹಂಚಿ ಹೋಗಿದೆ(ಉದಾ: ಕ್ರೈಸ್ತ ವಾಗ್ಮಯದ ಕುರಿತು). ಅಂಥದೊಂದು ವಿಷಯದ ಸಾರ ಪರಿಚಯವಾಗುವ ದೃಷ್ಟಿಯಿಂದ ಬರೆದ ಲೇಖನಗಳಲ್ಲಿ ಈ ಪುನರಾವೃತ್ತಿ ಅನಿವಾರ್ಯ ಎಂದಿದ್ದಾರೆ. ಜೊತೆಗೆ ಕ್ರೈಸ್ತ ಸಾಹಿತ್ಯವನ್ನು ಕುರಿತ ಲೇಖನವನ್ನು ಮೂಲತಋ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದವರ ಅನುಜ್ಞೆಯ ಮೇರೆಗೆ ಬರೆಯಲಾಯಿತು. ಅದನ್ನು ತುಸು ನವೀಕರಿಸಿ ಇಲ್ಲಿ ಸೇರಿಸಿದೆ. ಐ.ಮಾ. ಮುತ್ತಣ್ಣನವರ ಪುಸ್ತಕದ ಪರಾಮರ್ಶೆಯನ್ನು ಇಲ್ಲಿ ಕೊಟ್ಟಿದೆ. ಆ ಗ್ರಂಥವನ್ನು ಆಧರಿಸಿ, ಅನೇಕರು ತಮ್ಮ ಹೊಸ ವಿಚಾರಗಳನ್ನು ಮಂಡಿಸುತ್ತ ಇದದಾರೆ. ಆಗೀಗ ಅದರಿಂದ ಅವತರಣಿಕೆಗಳನ್ನು ಉದ್ಧರಿಸುತ್ತಾರೆ. ಆ ಗ್ರಂಥವು ಎಷ್ಟರಮಟ್ಟಿಗೆ ಪ್ರಾಮಾಣ್ಯ ಎಂಬುದರ ಸ್ಪಷ್ಟ ಕಲ್ಪನೆ ಇರಲೆಂದು ಈ ಪರಾಮರ್ಶೆ ಬಂದಿದೆ ಎಂದು ತಿಳಿಸಿದ್ದಾರೆ. ಇಲ್ಲಿ ಕನ್ನಡ ಸಾಹಿತ್ಯ ಚರಿತ್ರೆಯ ಕಾಲ ವಿಭಾಗ- ಒಂದು ಸಮನ್ವಯ, ಹದಿನೆಂಟನೆಯ ಶತಮಾನದ ಕನ್ನಡ ಸಾಹಿತ್ಯ, ಕನ್ನಡದಲ್ಲಿ ಕ್ರೈಸ್ತ ಸಾಹಿತ್ಯ-1-ಸ್ಥೂಲ ನೋಟ, ಕನ್ನಡದಲ್ಲಿ ಕ್ರೈಸ್ತ ಸಾಹಿತ್ಯ-2-ಮುದ್ರಣ ಪೂರ್ವಯುಗ, ಕನ್ನಡದಲ್ಲಿ ಕ್ರೈಸ್ತ ಸಾಹಿತ್ಯ-3-ದ್ವಿತೀಯ ಯುಗ, 19ನೇ ಶತಮಾನದಲ್ಲಿ ಪಾಶ್ಚಾತ್ಯ ವಿದ್ವಾಂಸರ ಕನ್ನಡಸೇವೆ - ಒಂದು ಸಮೀಕ್ಷೆ, ಶ್ರೀಕಂಠೇಶಗೌಡರ ಕಾಲದ ಕನ್ನಡ ಸಾಹಿತ್ಯ, ಕನ್ನಡದ ಮೊದಲ ಕಾದಂಬರಿಗಳ ಚಾರಿತ್ರಿಕ ಹಿನ್ನೆಲೆ, ಅಕ್ಕನಾಗಮ್ಮನ ಜೋಗಳ ಪದ, ಮುದ್ದಣ ಕಂಡ ಶಿವ, ಕನ್ನಡದಲ್ಲಿ ಹನಿಗತೆಗಳು, ಕಾವ್ಯಾಭ್ಯಾಸಕ್ಕೆ ಕಂಪ್ಯೂಟರ್ ಸಹಾಯ ಎಂದ 12 ಲೇಖನಗಳು ಸಂಕಲನಗೊಂಡಿವೆ
©2024 Book Brahma Private Limited.