ಮೈತ್ರಿ

Author : ಪ್ರಣತಾರ್ತಿಹರನ್

Pages 74

₹ 16.00




Year of Publication: 1996
Published by: ಸಮುದಾಯ ಅಧ್ಯಯನ ಕೇಂದ್ರ
Address: ಮೈಸೂರು

Synopsys

ವೈಚಾರಿಕವಾದ 13 ಲೇಖನಗಳ ಸಂಕಲನ `ಮೈತ್ರಿ’. ಓದುಗಾರಿಕೆ, ಗಮಕ ಕಲೆ, ಸಾಹಿತ್ಯ ಪ್ರಭಾವ ಇಂಥಹ ಆಸಕ್ತಿಯ ಕೆಲವು ಲೇಖನಗಳಿವೆ. ಭಾರತೀಯ ಸಂಸ್ಕೃತಿಯ ಸಾರ, ಪರೋಪಕಾರವೇ ಪುಣ್ಯ - ಪರಪೀಡನವೇ ಪಾಪ, ವೇದಜ್ಯೋತಿ, ಮಹಾಮಂತ್ರ ಮೊದಲಾದ ಸಂಸ್ಕೃತಿ ಚಿಂತನೆಯ ಲೇಖನಗಳೂ ಇವೆ. ಸಾಹಿತ್ಯ, ಕಲೆ, ಶಿಕ್ಷಣ, ರಾಷ್ಟ್ರೀಯತೆ, ನಿಸರ್ಗ, ನೈತಿಕತೆ, ಧರ್ಮ ಅವರ ಲೇಖನಗಳ ವೈವಿಧ್ಯಪೂರ್ಣ ವಸ್ತು. ಬಸವಾನಿ ರಾಮಶರ್ಮಾ ಅವರ ಈ ಲೇಖನಗಳನ್ನು ಲೇಖಕ ಪ್ರಣತಾರ್ತಿಹರನ್‌ ಅವರು ಸಂಪಾದಿಸಿದ್ದಾರೆ.

About the Author

ಪ್ರಣತಾರ್ತಿಹರನ್

ಸಾಹಿತ್ಯ ರಂಗದಲ್ಲಿ ನಿರಂತರ ಬರೆಯುವ ಸೃಜನಶೀಲತೆಯನ್ನು ಕಾಪಿಟ್ಟುಕೊಂಡಿರುವ ಪ್ರಣತಾರ್ತಿಹರನ್ ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ಬಸವಾಪಟ್ಟಣದವರು. ತೋಟಗಾರಿಕೆಯೇ ಕುಲಕಸುಬಾಗಿದ್ದ, ಹರಿಕಥೆ ಮತ್ತು ಗಮಕ ಕಲೆಯನ್ನು ರೂಢಿಸಿಕೊಂಡ ಪೂರ್ವಿಕರಿದ್ದ ಮನೆತನದಲ್ಲಿ ಹುಟ್ಟಿ, ಪ್ರಖರ ಸಾಂಸ್ಕೃತಿಕ ಮತ್ತು ವಿದ್ವತ್ ಪರಿಸರದ ಸಂಸ್ಕಾರ ಪಡೆದವರು ಪ್ರಣತಾರ್ತಿಹರನ್. ಜಾನಪದ ಮತ್ತು ಭಾರತೀಯ ಸಾಹಿತ್ಯದ ಸ್ನಾತಕೋತ್ತರ ಡಿಪ್ಲೊಮಾ ಪದವಿ ಪಡೆದಿದ್ಧಾರೆ. 2015ನೇ ಸಾಲಿನ ಪ್ರವಾಸ ಸಾಹಿತ್ಯ ಪ್ರಕಾರದ ಅತ್ಯುತ್ತಮ ಕೃತಿಗೆ ಅವರ ‘ಆಸುಪಾಸು’ ಪ್ರವಾಸ ಕಥನ ಆಯ್ಕೆಯಾಗಿದೆ. ...

READ MORE

Related Books