ಲೇಖಕರಾದ ಡಾ. ಶರಣಬಸಪ್ಪ ವಡ್ಡನಕೇರಿ ಹಾಗೂ ಡಾ. ನಾಗಪ್ಪ ಟಿ. ಗೋಗಿ ಹಾಗೂ ಅವರು ಜಂಟಿಯಾಗಿ ಸಂಪಾದಿಸಿದ ಲೇಖನಗಳ ಸಂಗ್ರಹ ಕೃತಿ-ಜ್ಞಾನ ಸಿರಿ. ಜ್ಞಾನಸಿರಿ ವೈವಿಧ್ಯಮಯ ವಿಷಯಗಳ ಮಹತ್ವದ ಸಾಹಿತ್ಯ ಕೃತಿ.ಇಲ್ಲಿ ಶಿಷ್ಟ ಮತ್ತು ಜನಪದ ಸ್ಥಳನಾಮ ವಿಜ್ಞಾನಕ್ಕೆ ಸಂಬಂಧಿಸಿದ ಲೇಖನಗಳು ಸಂಚಯ ಗೊಂಡಿವೆ. ಭೂತ,ವರ್ತಮಾನ ಹಾಗೂ ಭವಿಷ್ಯತ್ತಿನ ಸಾಹಿತಿಕ ಕಾಳಜಿಗಳುಇಲ್ಲಿ ವ್ಯಕ್ತವಾಗಿವೆ. ಹಳೆಗನ್ನಡದ ಅಧ್ಯಯನದ ಅವಶ್ಯಕತೆಯಿಂದ ಹಿಡಿದು ಸಾವಯವ ಕೃಷಿ ಅವಲಂಬನೆ ಹಾಗೂ ಮನೆವಾರ್ತೆಯ ಕಡೆಗೂ ಲೇಖಕರ ಗಮನ ಹರಿದಿದೆ. ಪ್ರಸ್ತುತ ಸಂದರ್ಭದಲ್ಲಿ ಸಾಹಿತ್ಯಕ್ಕೆ ಮಾನವೀಯ ಮೌಲ್ಯಗಳನ್ನು ಬಿತ್ತಿ ಬೆಳೆಯುವ,ಸಂಬಂಧಗಳ ಸೂಕ್ಷ್ಮತೆಯನ್ನು ಗಮನಕ್ಕೆ ತರುವ ಭಾರತೀಯ ಸಂಪ್ರದಾಯ ರೀತಿ-ರಿವಾಜುಗಳನ್ನು ಹಾಗೂ ನಡಾವಳಿಕೆಗಳ ಶ್ರೇಷ್ಠತೆಯನ್ನು ಎತ್ತಿ ಹಿಡಿಯುವ ಅಗತ್ಯತೆ ಇದೆ.
ಕನ್ನಡ ಬಹಿರಂಗ ಭೂಮಿಯ ವೈಶಿಷ್ಟತೆ,ಜಾನಪದ ಹಿನ್ನೆಲೆಯಲ್ಲಿ ನಂಬಿಕೆ ಮತ್ತು ಆಚರಣೆ,ಶರಣ ಸಾಹಿತ್ಯ ಮತ್ತು ಜಾತಿ ಪದ್ಧತಿ, ಪಾರಂಪರಿಕ ಮತ್ತು ಆಧುನಿಕ ಕೃಷಿಯ ವೈರುದ್ಧ್ಯಗಳು, ಸೀತೆಯ ಪುಣ್ಯಪ್ರಾಯೋಗಿಕ ವಿಮರ್ಶೆ, ಹಳಗನ್ನಡ ಸಾಹಿತ್ಯ ಬೋಧನೆ ಎಂದು ಎಷ್ಟು ಪ್ರಸ್ತುತ,ಹೀಗೆ ಹಲವಾರು ಸಂಶೋಧನಾತ್ಮಕ ಲೇಖನಗಳನ್ನು ಒಳಗೊಂಡಿದೆ.
ಸಾಹಿತಿ ಡಾ. ಎಸ್. ಶಾರದಾದೇವಿ ಜಾಧವ ಅವರು ಕೃತಿಗೆ ಬೆನ್ನುಡಿ ಬರೆದು ‘ಸಂಶೋಧನಾತ್ಮಕ ಬರಹಗಳು ವಸ್ತು ವೈವಿಧ್ಯತೆಯಿಂದ ಕೂಡಿವೆ. ಆಳವಾದ ಚಿಂತನಗೆ ಹಚ್ಚುತ್ತವೆ. ಓದಿನ ವಿಸ್ತಾರವನ್ನು ಹೆಚ್ಚಿಸುತ್ತವೆ. ಸಂಶೋಧನೆ ಅಧ್ಯಯನಕ್ಕೆ ಪ್ರೇರಣೆ ನೀಡುತ್ತವೆ’ ಎಂದು ಪ್ರಶಂಸಿಸಿದ್ದಾರೆ.
©2024 Book Brahma Private Limited.