ಲೇಖಕಿ ಸಂಗೀತಾ ಮಠಪತಿ ಹಾಗೂ ವಿಶ್ವನಾಥ ಅರಬಿ ಅವರು ಸಂಪಾದಿಸಿರುವ ಕವನ ಸಂಕಲನ ಎಲೆಯ ಮರೆಯ ಕಾಯಿಗಳು.
ಕೆಲವರು ಅದೆಷ್ಟೋ ವಿಶೇಷ ಕೌಶಲ್ಯ ಮತ್ತು ಪ್ರತಿಭೆಯನ್ನು ಹೊಂದಿರುತ್ತಾರೆ. ಆದರೆ, ಅವರು ಇತರರಿಂದ ಗುರುತಿಸಲ್ಪಟ್ಟಿರುವುದಿಲ್ಲ. ಹೇಗಾದರೂ ಮಾಡಿ ನಾನೂ ಸಹ ಸಮಾಜದಲ್ಲಿ ಗುರುತಿಸಿಕೊಳ್ಳುವಂತಾಗಬೇಕೆನ್ನುವ ಮಹಾದಾಸೆ,ಕಿಚ್ಚು ಪ್ರತಿಯೊಬ್ಬರಲ್ಲೂ ಇದ್ದೇ ಇರುತ್ತದೆ. ಹೀಗೆ ಗುಪ್ತ ಪ್ರತಿಭಾವಂತ ಸಾಧಕರನ್ನು "ಎಲೆಯ ಮರೆಯ ಕಾಯಿಗಳು" ಎಂದು ಕರೆಯುತ್ತೇವೆ. ಈ ಕೃತಿಯು ಅಂಥಹ ಎಲೆಯ ಮರೆಯ ಕಾಯಿಗಳನ್ನು ವಾಸ್ತವ ಪ್ರಪಂಚಕ್ಕೆ ಪರಿಚಯಿಸುವ ಮಹತ್ತರ ಕಾರ್ಯಕ್ಕೆ ಮುಂದಾಗಿದೆ. ಇದು ಸಂಪಾದಿತ ಕವನ ಸಂಕಲನವಾಗಿದ್ದು ನಾಡಿನ ಹಲವಾರು ಕವಿ ಮನಸುಗಳ ಸಾಹಿತ್ಯದ ಸುಗಂಧವನ್ನು ತುಂಬಿಕೊಂಡಿದೆ. ಕರ್ನಾಟಕದ ಸೀಮೆಯನ್ನು ದಾಟಿ ಹೊರ ರಾಜ್ಯದ ಕನ್ನಡಿಗರ ಕವನಗಳನ್ನೂ ಸಹ ಹೊಂದಿದೆ. ಇಲ್ಲಿನ ಕವನಗಳು ಒಂದಕ್ಕಿಂತ ಒಂದು ಸುಂದರ ಮತ್ತು ತಮ್ಮದೇ ಆದ ಭಾವ ವ್ಯಕ್ತಪಡಿಸುವ ಅರ್ಥಗಳನ್ನು ಒಳಗೊಂಡಿವೆ. ಭಿನ್ನ ವಿಭಿನ್ನ ಭಾವಗಳ ಹಸಿವಿಗೆ ಪದಗಳಿಂದ ಊಟ ಬಡಿಸಿರುವ ಹಲವಾರು ಕವಿ/ಕವಯಿತ್ರಿಯರ ಅಪರೂಪದ ಕಾವ್ಯ ಸರಣಿ ಹೊತ್ತ ಕೃತಿಯೇ ಈ "ಎಲೆಯ ಮರೆಯ ಕಾಯಿಗಳು".
©2024 Book Brahma Private Limited.