ಲೇಖಕ ಪಂಚಾಕ್ಷರಿ ಬಿ. ಪೂಜಾರಿ ಅವರ ಕವನಗಳ ಸಂಕಲನ-ದಿಗ್ಗಾವಿ ದೀಪ. ಮೂವರು ಕವಯತ್ರಿಯರು ಸೇರಿದಂತೆ 14 ಕವಿಗಳ ಒಟ್ಟು 135 ಕವನಗಳನ್ನು ಸಂಕಲಿಸಲಾಗಿದೆ. ಕವಿ ಹಾಗೂ ಸಾಹಿತಿ ಸಂಗಣ್ಣ ಹೋತಪೇಟ ಅವರು ಮುನ್ನುಡಿ ಬರೆದು ‘ಇಲ್ಲಿಯ ಕವಿತೆಗಳು ಕಾವ್ಯ ಲಕ್ಷಣಗಳಿಂದ ಶೋಭಿಸುತ್ತವೆ. ಸಾಮಾಜಿಕ ವಿದ್ಯಮಾನಗಳನ್ನು ವೈಚಾರಿಕ ನೆಲೆಯಲ್ಲಿ ಪ್ರತಿಪಾದಿಸುತ್ತವೆ. ಮಹಿಳೆಯರ ನೋವು-ನಲಿವು, ರೈತರ ಸಂಕಷ್ಟಗಳು, ಆಡಂಬರದ ಆಚಾರಗಳು, ಶರಣರ -ಸಂತರ ಉಪದೇಶಗಳು ಹೀಗೆ ವಸ್ತು ವೈವಿಧ್ಯಮಯವಾಗಿದೆ’ ಎಂದು ಪ್ರಶಂಸಿಸಿದ್ದರೆ, ಸಾಹಿತಿ ನಾಗಯ್ಯಸ್ವಾಮಿ ಅಲ್ಲೂರು ಬೆನ್ನುಡಿ ಬರೆದು ‘ಗ್ರಾಮೀಣ ಭಾಗದ ಕವಿ-ಕಲಾವಿದರು ಬರೆದ ಸಾಹಿತ್ಯಕ್ಕೆ ಸೂಕ್ತ ವೇದಿಕೆ ಕಲ್ಪಿಸುವಲ್ಲಿ ಸಂಪಾದಕರ ಶ್ರಮ ಪ್ರಶಂಸಾರ್ಹ’ ಎಂದು ಅಭಿಪ್ರಾಯಪಟ್ಟಿದ್ದಾರೆ.
©2024 Book Brahma Private Limited.