‘ದೇವನೂರು ಮಹಾದೇವರ ಕಥೆಗಳು, ಕಾದಂಬರಿಗಳು’ ನಾಡಿನ ಸಾಕ್ಷಿಪ್ರಜ್ಞೆ ಎಂದೇ ಕರೆಸಿಕೊಳ್ಳುವ ಲೇಖಕ ದೇವನೂರು ಮಹಾದೇವ ಅವರ ಸಾಹಿತ್ಯದ ಮೇಲೆ ಬೆಳಕು ಚೆಲ್ಲುವ ಕೃತಿ. ಲೇಖಕ ಉದಯ್ ಕುಮಾರ್ ಹಬ್ಬು ಸಂಪಾದಿಸಿದ್ದಾರೆ. ಇಲ್ಲಿ ಮೊದಲಿಗೆ ‘ದಲಿತ ಸಾಹಿತ್ಯ ನಡೆದು ಬಂದ ದಾರಿ’ ಎಂಬ ಪ್ರಾಸ್ತಾವಿಕ ನುಡಿಗಳಿವೆ. ದೇವನೂರರ ಸಣ್ಣ ಕಥೆಗಳಾದ ದ್ಯಾವನೂರು, ಮಾರಿಕೊಂಡವರು, ಗ್ರಸ್ಥರು, ಒಂದು ದಹನದ ಕತೆ, ದತ್ತು, ಡಾಂಬರು ಬಂದುದು, ಮೂಡಲ ಸೀಮೆಲಿ ಕೊಲೆ, ಗಿಲೆ ಮುಂತಾಗಿ, ಅಮಾಸ ಕತೆಗಳಿವೆ. ಜೊತೆಗೆ ಒಡಲಾಳ, ಕುಸುಮಬಾಲೆ ಕಾದಂಬರಿಗಳಿದ್ದು, ಉಪಸಂಹಾರ, ದಲಿತ ಸಮಾಜದ ಒಳ ವಿಮರ್ಶಕ ಹಾಗೂ ದೇವನೂರ ಮಹಾದೇವರ ಸಣ್ಣಕಥೆಗಳು ಎಂಬ ಲೇಖನಗಳು ಸಂಕಲನಗೊಂಡಿವೆ.
©2024 Book Brahma Private Limited.